ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿರುಪತಿ ಯಾತ್ರೆಯ ಮಾಡಿ ತಿರುಪತಿ ಪ ತಿರುಪತಿಯಾತ್ರೆಯ ಮಾಡಿ ಮನದ ದುರಿತಪಾಪಗಳನೀಡಾಡಿ ಆಹ ಸ್ಮರಕೋಟಿ ತೇಜನ ದರುಶನಲಾಭವು ದೊರಕಿದ ಸುಜನರ ಚರಿತೆಯ ಕೇಳುತ್ತ ಅ.ಪ ಸುಟ್ಟು ಹೋಗುವದಿದು ಚಂದ ಮೆಟ್ಟು ಮೆಟ್ಟಿಲನೇರುವ ವೃಂದ ಜನ ಸೃಷ್ಟಿಗೊಡೆಯ ಗೋವಿಂದ ಆಹಾ ದಿಟ್ಟಮನದಿ ಪರಮೇಷ್ಠಿಪಿತನ ಪಾಡಿ ಗಟ್ಯಾಗಿ ಗೋವಿಂದ ಗೋವಿಂದನೆನುವರು1 ಗಾಳಿಗೋಪುರವನ್ನೆ ದಾಟಿ ಭಕ್ತ- ರಾ ಮಂಟಪಕೆ ಉಂಟೆ ಸಾಟಿ ತಾಳ ಮೇಳದವರ ಗಲಾಟೀಯಿಂದ ಶೋಭಿಪ ಪವನನಕೋಟಿ ಕೇಳಿ ನೋಡುತ್ತ ಭಕುತಿಸೂರ್ಯಾಡುತ್ತ ಮಹಿಮೆ ಕೊಂ- ಡಾಡುತ್ತ ಪಾಡುತ್ತ ಕುಣಿವ ಸಜ್ಜನರೆಲ್ಲ 2 ಸ್ವಾಮಿ ಪುಷ್ಕರಣಿಯ ಸ್ನಾನ ಮಾಡಿ ಆ ಮಹವರಹದೇವರನ್ನ ಕಾಮ- ಧೇನೆಂಬ ಶ್ರೀ ಗುರುಗಳನ್ನ ನೋಡಿ ಆ ಮಹಾ ಅಶ್ವತ್ಥರಾಜನ್ನ ಸ್ತುತಿಸಿ ನೇಮದಿ ದಿಗ್ಗಾವಿ ಆಚಾರ್ಯರಿಗೆ ನಮಿಸಿ ಶ್ರೀಧರನಾಲಯ ದ್ವಾರಕ್ಕೆ ಪೋಗಲು 3 ಮೂರು ದ್ವಾರಗಳನ್ನೆ ದಾಟಿ ಮು- ರಾರಿಯ ಗುಡಿಸುತ್ತ ಕೋಟೆಯಲ್ಲಿ ಸಾರುವ ಭಕುತರ ಭೇಟಿಯಿಂದ ಅ- ಪಾರ ಜನುಮದ ಪಾಪಮೂಟೆ ಪೋಗಿ ಬೇಗದಿ ವಿಮಾನ ಶ್ರೀನಿವಾಸನ ನೋಡಿ ಸಾಗರಶಯನನ ದರುಶನ ಕೊಡುಕೊಡು ಎಂದು 4 ಕೊಪ್ಪರಿಗೆಯು ಮನೆಯಂತೆ ಹಣ ತಪ್ಪದೆ ಸುರಿಯುವರಂತೆ ನ- ಮ್ಮಪ್ಪ ವೆಂಕಟಸ್ವಾಮಿಯಂತೆ ತಪ್ಪನಾಡುವರ ಶಿಕ್ಷಿಪನಂತೆ ಆಹಾ ಕ್ಷಿಪ್ರದಿ ಶ್ರೀಧರನಪ್ಪಣೆಯಂದದಿ ಅಪ್ರಮೇಯನ ಸೇವೆಗೊಪ್ಪುವ ಸುಜನರು 5 ಹೇಮದ್ವಾರದಿ ನಿಂತ ಜನರು ನಮ್ಮ ಸ್ವಾಮಿ ಶೃಂಗಾರ ನೋಡುವರು ಶ್ರೀನಿ- ವಾಸನೆ ಸಲಹು ಎಂಬುವರು ಪಾಹಿ ಪಾಹಿ ಶ್ರೀಪತಿ ಎನ್ನುತಿಹರು ಶ್ರೀಶ ಗೋವಿಂದ ಗೋವಿಂದ ಗೋವಿಂದ ಮಾಧವ ಮಾತುಳಾಂತಕ ದೇವ ಮಾತು ಲಾಲಿಸು ಎಂದು6 ಚರಣದಂದಿಗೆ ಗೆಜ್ಜೆವಲಿಯೆ ಪೊನ್ನ ಸರಪಳಿ ಪಾಡಗ ನಲಿಯೆ ಒಳ್ಳೆ ಜರದ ಪೀತಾಂಬರ ಹೊಳೆಯೆ ಪಟ್ಟೆ ವರವಲ್ಲಿ ಹೊಳೆಯುತ್ತ ಮೆರೆಯೆ ಆಹ ಸರಗಳು ವಲಿಯುತ್ತ ಪದಕಂಗಳ್ಹೊಳೆಯುತ್ತ ಉರದಲ್ಲಿ ಶ್ರೀದೇವಿ ಇರುವ ವೈಭವ ನೋಡಿ7 ವರಶಂಖು ಚಕ್ರ ಹಸ್ತದಲಿ ದಿವ್ಯ ಸಿರದಿ ಕಿರೀಟ ಮೆರೆಯುತಲಿ ಪಟ್ಟೆ ತಿಲುಕ ಕಸ್ತೂರಿ ಹೊಳೆಯುತಲಿ ಥಳ ಥಳ ಹೊಳೆವ ಮುಖಕಾಂತಿಯಲಿ ಅಹ ಕಡೆಗಣ್ಣ ನೋಟದಿ ಜಗವಮೋಹನ ಮಾಳ್ಪ ಅಗಣಿತ ಮಹಿಮನ ಸುಗುಣವ ಪಾಡುತ್ತ 8 ಕರುಣಿಗಳರಸನೆ ದೇವ ತನ್ನ ಶರಣು ಹೊಕ್ಕವರನ್ನೆ ಕಾವ ತನ್ನ ಭಜಕರಿಗಭಯವ ನೀವ ಇನ್ನು ಸರಿಯುಂಟೆ ಶ್ರೀರಮಾದೇವ ಅಹ ಪರಿಸರನೊಡೆಯನ ನಿರುತದಿ ಧ್ಯಾನಿಸಿ ದುರಿತಗಳಳಿದು ಸದ್ಗತಿಯ ಪಡೆವರೆಲ್ಲ 9 ಕಾಲಹರಣ ಮಾಡದಂತೆ ತ್ರಿ- ಧಾಮನ ಸ್ಮರಿಸುವ ಚಿಂತೆಯಲ್ಲಿ ಆಲಸ್ಯ ತೊರೆದಿಹರಂತೆ ಶ್ರೀನಿ- ವಾಸನೆ ಇದಕ್ಹೊಣೆಯಂತೆ ಅಹ ಕಾಲಕಾಲಕೆ ತಕ್ಕ ಲೀಲೆಯ ತೋರುವ ಪಾದ ಧ್ಯಾನಿಪ ಸುಜನರು 10 ಹತ್ತವತಾರದ ಹರಿಯು ತನ್ನ ಭಕ್ತರು ಸ್ತುತಿಸುವ ಧ್ವನಿಯ ಕೇಳಿ ಚಿತ್ತದಿ ನಲಿಯುವ ಪರಿಯು ಸುರರು ವಿಸ್ತರಿಸುವ ದಿನಚರಿಯು ಅಹ ಭಕ್ತರ ಸ್ತುತಿಸಲು ಮತ್ತವರಿಗೊಲಿಯುವ 11
--------------
ನಿಡಗುರುಕಿ ಜೀವೂಬಾಯಿ
ಸಾರಿದ ಡಂಗುರ ಯಮನು ಪ ಅಘ ನಾರೇರ ಎಳತಂದು ನರಕದಲ್ಲಿಡಿರೆಂದು ಅ.ಪ. ಹೊತ್ತಾರೆ ಎದ್ದು ಪತಿಗೆ ಎರಗದವಳ ಮೃತ್ತಿಕೆ ಶೌಚ ಮಾಡದೆ ಇಪ್ಪಳಾ ಬೆತ್ತಲೆ ಕುಳಿತು ಮೈದೊಳೆವಳ ನಾದಿನಿ ಅತ್ತೆ ಮಾವನ ಬೈವವಳೆಳೆದು ತನ್ನೀರೆಂದು 1 ತಿಲಕಾಯುಧವ ಬಿಟ್ಟು ಕುಂಕುಮವಿಡುವಳ ಬೆಳಗಾದ ಕಾಲಕ್ಕೂ ಮಲಗಿಪ್ಪಳ ಮಲಿನ ವಸ್ತ್ರದಲಿ ಪತಿಯ ಬಳಿಗೆ ಪೋಗುವಳ ಕಲಹಕಾರಿಯ ಹಿಡಿದೆಳೆದು ತನ್ನಿರಿಯೆಂದು 2 ಉತ್ತಮ ಗುರುಹಿರಿಯರನು ನಿಂದಿಸುವಳ ಪೆತ್ತ ಮಕ್ಕಳ ಮಾರಿ ಬದುಕುವಳ ಪ್ರತ್ಯೇಕ ಶಯ್ಯದಿ ಮಲಗಿ ಇಪ್ಪಳ ಪಿಡಿ ದೆತ್ತ ಎಳೆದು ತಂದು ನರಕದಲ್ಲಿಡಿರೆಂದು 3 ಜಲ ಜಕ್ಕಿ ಸಾಳಿ ಕಂಬಳಿ ಬೋಳಿ ಬಕ್ಕಿ ಗೊಂ ಡಳಿ ಮೊದಲಾದವು ದೈವವೆಂದು ತಿಳಿದು ಪಿಶಾಚಿ ಎಂಜಲ ಉಂಡು ಹಿಗ್ಗುವ ಲಲನೇರಾ ಸೆಳೆದು ತನ್ನಿರೋ ಎಂದು 4 ನಾಗೇಂದ್ರ ಶಯನನ ದಿನದುಪವಾಸದ ಜಾಗರ ಮಾಡದೆ ಮಲಗಿಪ್ಪಳಾ ಭಾಗವತ ಸಚ್ಛಾಸ್ತ್ರ ಕೇಳದೆ ಉನ್ಮತ್ತ ಳಾಗಿರುವಳ ಎಳೆದು ತನ್ನಿರೆಂದು 5 ಗಂಡ ನಿರ್ಧನಿಕನೆಂದಪಮಾನ ಮಾಳ್ಪಳ ಉಂಡ ಶೇಷಾನ್ನುವನುಣಿಸುವಳಾ ಕೊಂಡೆ ಮಾತುಗಳಾಡಿ ಕಳವಳಗೊಳಿಪಳ ಮಂಡೆಗೊದಲು ಹಿಡಿದು ಎಳೆದು ತನ್ನಿರಿ ಎಂದು6 ಉಡಲಿಲ್ಲ ಉಣಲಿಲ್ಲ ಇಡಲಿಲ್ಲ ತೊಡಲಿಲ್ಲ ಸುಡಲಿಗಂಡನ ಒಗೆತನವೆನ್ನುತಾ ಹಡೆದವರನು ನುಡಿನುಡಿಗೆ ಬಯ್ಯುತಿಪ್ಪಂಥ ಕಡು ಪಾಪಿಗಳ ಹೆಡ ಮುಡಿಗಟ್ಟಿ ತನ್ನಿರಿ ಎಂದು7 ಸಾಲೆಡೆಯಲಿ ಭೇದ ಮಾಡಿ ಬಡಿಸುವಳ ನೀಲಾಂಬರವನುಟ್ಟು ಮಡಿಯೆಂಬಳ ಬಾಲಕರ ಬಡಿದಳಿಸುತಿಪ್ಪಳ ಹಿಂ ಗಾಲ ತೊಳೆಯದವಳ ಎಳೆದು ತನ್ನಿರೋ ಎಂದು8 ಪತಿಗೆ ಬೇಕಾದವರ ಅಪಮಾನ ಮಾಳ್ಪಳ ಮೃತವತ್ಸ ಗೋವಿನ ಪಾಲುಂಬಳಾ ಹುತವಾದ ಅಗ್ನಿ ತೊಳೆದು ನಂದಿಸುವಳ ಮತಿಗೇಡಿಯ ಬಿಡದೆಳೆದು ತನ್ನಿರೋ ಎಂದು 9 ಒಲಿವ ಔಷಧ ಮಾಡಿ ಪತಿಯ ಬಳಲಿಸುವಳ ಮಲಮಕ್ಕಳೊಳು ಮತ್ಸರಿಸುತಿಪ್ಪಳಾ ಕಳವಿಲಿ ಕಾಂತನ ಧನವ ವಂಚಿಸುವಳ ಗಳಕೆ ಪಾಶವ ಕಟ್ಟ ಎಳೆದು ತನ್ನಿರೋ ಎಂದು 10 ಮಿಥ್ಯಾವಾದಿಯ ಕೂಡ ಸ್ನೇಹ ಮಾಳ್ಪಳಾ ವೃತ್ತಿಲಿ ಬದುಕುವಳೆಳೆದು ತನ್ನಿರೋ ಎಂದು 11 ಲಶನು ವೃಂತಕಾದಿಗಳನು ಭಕ್ಷಿಸುವಳಾ ಸೊಸೆಯರೊಡನೆ ಮತ್ಸರಿಸುತಿಪ್ಪಳಾ ಹಸಿದು ಬಂದವರಿಗೆ ಅಶನವಿಲ್ಲೆಂಬಳಾ ಉಸಿರು ಬಿಡದಂತೆ ಎಳೆದು ತನ್ನಿರೊ ಎಂದು 12 ತುಲಸಿ ವೃಂದಾವನಕಭಿನಮಿಸದವಳ ಜಲವ ಸೋಸದೆ ಪಾನವ ಮಾಳ್ಪಳಾ ಫಲ ಧಾನ್ಯಾದಿಗಳ ನೋಡದೆ ಪಾಕ ಮಾಳ್ಪಳ ಮಳೆ ಗಾಳಿ ನಿಂದಿಪಳ ಎಳೆದು ತನ್ನಿರೋ ಎಂದ 13 ಮೀಸಲು ಮಡಿ ಎನ್ನದೆ ಭಕ್ಷಿಸುವಳ ಕೇಶಿಯೊಡನೆ ಗೆಳೆತನ ಮಾಳ್ಪಳ ದಾಸೆರಿಂದಲಿ ಪಾಕ ಪಾತ್ರೆ ಮುಟ್ಟಿಸುವಳ ನಾಸಿಕ ಬಂಧಿಸಿ ಎಳೆ ತನ್ನಿರೋ 14 ಬಾಲಕರನು ತೊಟ್ಟ್ಟಿಲೊಳಿಟ್ಟು ತೂಗುತ ಪಾಲೆರೆವುತ ಬೀಸುತ ಕಟ್ಟುತಾ ಆಲಯದೊಳು ಕೆಲಸಗಳ ಮಾಡುತ ಲಕ್ಷ್ಮೀ ಲೋಲನ ಗುಣವ ಪಾಡುವರ ಮುಟ್ಟದಿರೆಂದು15 ಅರಿಷಣ ಕುಂಕುಮ ಪುಷ್ಟಾಂಜನ ವಸ್ತ್ರಾ ಸರಸವಾಡುತ ಸುಖ ಹರಿಗೆ ಅರ್ಪಿತವೆಂಬ ಹರಿದ್ದೇರಿದೆಡೆಗೆ ಕೈಮುಗಿದು ಬನ್ನಿರಿ ಎಂದು16 ಅಗಣಿತ ಮಹಿಮ ಶ್ರೀ ಜಗನ್ನಾಥ ವಿಠಲನ್ನ ಬಗೆಬಗೆಯಿಂದ ಪಾಡುತಲೀ ಹೊಗಳುವ ದಾಸರ ಬಗೆಯ ನೇಮಿಸಿ ಕಾಯ್ವ ಸುಗುಣೇರಿದ್ದೆಡೆಗೆ ಕೈಮುಗಿದು ಬನ್ನಿರೆಂದು 17
--------------
ಜಗನ್ನಾಥದಾಸರು