ಎಂದಿಗ್ಹ್ಯೋದೀತಯ್ಯಾ ಹರಿ ಹರೀ
ಎಂದು ಮುಳುಗೀತಯ್ಯಾ ಪ
ಎಂದಿಗ್ಹೋದೀತು ಸುಖ ಅಂದಗೆಡಿಪ ಮಹ
ಮಂದಮತಿಯು ಎನ್ನಿಂದ ಬಿಟ್ಟು ದೂರ ಅ.ಪ
ಕತ್ತಲ ಕಾಳಿದು ಎನ್ನನು
ಸುತ್ತಿಕೊಂಡು ಸೆಳೆದು
ಸತ್ಯಮರೆಸಿ ಸ್ಥಿರಚಿತ್ತ ಕೆಡಿಸಿ ಪಿಡಿ
ದೆತ್ತಿ ಹಾಕುತಿದೆ ಮತ್ತೆ ಭವಬಂಧದಿ 1
ಮುಂದರಿಗೊಡದಿದು ನಿರುತದ
ಅಂದವ ತಿಳಿಗೊಡದು
ಬಂಧಿಸಿ ಬಲುಘೋರಾಂಧಕಾರ ಮುಚ್ಚಿ
ಸಂದಿನೊಳ್ನೂಕೆನ್ನ ಕೊಂದು ತಿನ್ನುತಿದೆ 2
ತೆರೆದು ನೋಡಲೀಯದು ಕಣ್ಣಿಗೆ
ಪರದೆಯ ಹಾಕುವುದು
ನರಹರಿಶರಣರ ಕರುಣಮಂ ತಪ್ಪಿಸಿ
ಪರಮ ಶ್ರೀರಾಮ ನಿಮ್ಮ ಚರಣ ದೂರೆನಿಪುದು 3