ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗ್ಹ್ಯೋದೀತಯ್ಯಾ ಹರಿ ಹರೀ ಎಂದು ಮುಳುಗೀತಯ್ಯಾ ಪ ಎಂದಿಗ್ಹೋದೀತು ಸುಖ ಅಂದಗೆಡಿಪ ಮಹ ಮಂದಮತಿಯು ಎನ್ನಿಂದ ಬಿಟ್ಟು ದೂರ ಅ.ಪ ಕತ್ತಲ ಕಾಳಿದು ಎನ್ನನು ಸುತ್ತಿಕೊಂಡು ಸೆಳೆದು ಸತ್ಯಮರೆಸಿ ಸ್ಥಿರಚಿತ್ತ ಕೆಡಿಸಿ ಪಿಡಿ ದೆತ್ತಿ ಹಾಕುತಿದೆ ಮತ್ತೆ ಭವಬಂಧದಿ 1 ಮುಂದರಿಗೊಡದಿದು ನಿರುತದ ಅಂದವ ತಿಳಿಗೊಡದು ಬಂಧಿಸಿ ಬಲುಘೋರಾಂಧಕಾರ ಮುಚ್ಚಿ ಸಂದಿನೊಳ್ನೂಕೆನ್ನ ಕೊಂದು ತಿನ್ನುತಿದೆ 2 ತೆರೆದು ನೋಡಲೀಯದು ಕಣ್ಣಿಗೆ ಪರದೆಯ ಹಾಕುವುದು ನರಹರಿಶರಣರ ಕರುಣಮಂ ತಪ್ಪಿಸಿ ಪರಮ ಶ್ರೀರಾಮ ನಿಮ್ಮ ಚರಣ ದೂರೆನಿಪುದು 3
--------------
ರಾಮದಾಸರು