ತನ್ನ ತಾ ತಿಳಿಯುವದೆ ಜ್ಞಾನ ಮನಮುಟ್ಟು ಪೂರ್ಣ
ಚೆನ್ನಾಗಿ ಸದ್ಗುರುವಿನ ಕೇಳಿರೊ ಖೂನ ಧ್ರುವ
ತನು ಮನವಿಟ್ಟು ತಿಳಿವದೀ ಗುರುಗುಟ್ಟು
ಧನ ದ್ರವ್ಯಾರ್ಜಿತವನಿಟ್ಟು ಕೇಳಿ ಕಿವಿಗೊಟ್ಟು
ಅನುಬವದ್ಹೆಚ್ಚಿ ಮೆಟ್ಟು ಸಾಧಿಸಿ ವೈರಾಗ್ಯ ಕೊಟ್ಟು
ಖೂನಮಾಡಿಕೊ ಬೇಕಿಟ್ಟು ಅನುಮಾನ ಬಿಟ್ಟು 1
ಗಿಳಿಯಾಡಿದಂತೆ ನುಡಿಯಾತಕ ಬಾಹುದು ನೋಡಿ
ಹೇಳ್ಯಾಡಕೊಂಬುದೀಡ್ಯಾಡಿ ಮಾತಿನ ರೂಢಿ
ಬೆಳಗಿನೊಳು ಬೆರದಾಡಿ ಘನಕ ಘನ ಕೂಡಿ 2
ನುಡಿ ನಡಿ ಒಂದಾದರೆ ವಸ್ತು ತಾನಿಹುದು ದೂರ
ಬಿಡಲರಿಯದು ಹಾಂಗಾದರ ಎಂದಿಗಾರು ಒಡಗೂಡಿ
ನೋಡಿದರೆ ತನ್ನೊಳು ತಾಂ ನಿಜ ಖರೆ
ಸಾರ 3