ಏಕೆ ಚಿಂತಿಪೆ ನೀ ಎಲೆ ಕೋತಿಮನವೆ
ಪಾದ ಗಟ್ಟ್ಯಾಗಿ ನಂಬದಲೆ ಪ
ಹಿತದ ಭಕ್ತನು ಎಂದು ಮತಿಹೀನ ಭಸ್ಮಗುರಿ
ಹಸ್ತವರವಿತ್ತ್ಹರನು ಮತಿದಪ್ಪೋಡುತಿರೆ
ಗತಿನೀನೆ ಹರಿಯೆನಲು ಅತಿದಯದಿಂ ಶಿವನ್ನುಳಿಸಿ
ಕೃತ್ತಿಮನ್ನಳದ ಹರಿ ಪತಿತಮಹಾತ್ಮರಿಯೆ 1
ಘುಡುಘುಡಿಸಿ ಹಿರಣ್ಯನು ಜಡಮತಿ ಹರಿಯೆಲ್ಲಿ
ಗಡ ತೋರೀ ಕಂಬದಿ ಎಂದಾರ್ಭಟಿಸಿ ಬರಸೆಳೆಯೆ
ನಡುನಡುಗಿ ಪ್ರಹ್ಲಾದ ಜಡಜಾಕ್ಷ ಪೊರೆಯೆನಲು
ಮೂಡಿ ಕಂಬದಿ ಖಳನ ಒಡಲ ಬಗೆದದ್ದರ್ಹಿಯೆ 2
ಕುರುಪನ ಸಭೆಯೊಳಗೆ ಮೊರೆಯಿಟ್ಟ ದ್ರೌಪದಿಗೆ
ಕರುಣದಕ್ಷಯವಿತ್ತು ಪೊರೆದ ಪರಮಾತ್ಮ
ಕರುಣಾಳು ಶ್ರೀರಾಮ ಚರಣದಾಸರ ನೆರ
ಅರೆಘಳಿಗೆ ಬಿಟ್ಟಿರನು ನಿರುತ ನೀ ಸ್ಮರಿಸೋ 3