ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದನನಂದನೊಲಿಯೆ ಏನಂದದ್ದೆ ವೇದ ವೃಂದಾ ಪ 'ಅ'ಮೊದಲು 'ಕ'್ಷ ಕಾರಾಂತ ಈ ಮಹಾವರ್ಣಗಳೆಲ್ಲ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ 1 ಪೋಪದು ಬರುತಿಪ್ಪುದು ಕೋಪಶಾಣಿ ಮಾಡುವುದು ರೂಪ ಲಾವಣ್ಯವು ಹರಿವ್ಯಾಪಾರವೆಂದವರಿಗೆ 2 ಪಾವಕ ವಾಯು ತರು ಫಲಪುಷ್ಪ ಬಳ್ಳಿಲಿ ಹರಿ ಒಳಗೆ ವ್ಯಾಪ್ತನೆಂದವಗೆ 3 ತಾರೊ ಬಾರೊ ಬೀರೊ ಸಾರೊ ಮಾರೊ ಕೋರೊ ಹಾರೊ ಹೋರೊ ಸೇರೊ ಕೋರೊದೆಂಬ ದಿಶಾಪ್ರೇರಣೆ ಎಂದವರಿಗೆ 4 ಮಧ್ವಶಾಸ್ತ್ರ ಪ್ರವಚನ ಮುದ್ದುಕೃಷ್ಣನ ದರುಶನ ಸಿದ್ಧ ವಿಜಯವಿಠ್ಠಲನ ಪೊಂದಿ ಕೊಂಡಾಡುವವರಿಗೆ 5
--------------
ವಿಜಯದಾಸ
ಹರಿ ಹರಿ ಎನ್ನಿ ಸಿರಿಲೋಲ ಎನ್ನಿ ಧ್ರುವ ಹರಿ ಹರಿ ಎನ್ನಿ ಹರಿ ಹರಿ ಎನ್ನಿ ಹರಿ ಎಂದು ಮನದೊಳು ಸ್ಮರಿಸುವ ಬನ್ನಿ 1 ಹರಿ ಎಂದು ಪಡೆದ ಪ್ರಹ್ಲಾದ ಪ್ರತ್ಯಕ್ಷ ಹರಿ ಎಂದು ಪಾಂಡವರಿಗಾದ ಸುಪಕ್ಷ 2 ಹರಿ ಎಂದು ಉಪಮನ್ಯು ಪಡೆದ ಸುಕಾಲ ಹರಿ ಎಂದು ಧ್ರುವ ಏರಿದ ಅಢÀಳ 3 ಹರಿ ಎಂದು ಮುನಿಜನರಾದರು ಧನ್ಯ ಹರಿ ಎಂದವರಿಗೆ ಸರ್ವವು ಮಾನ್ಯ 4 ಹರಿ ಹರಿ ಎಂದು ಕೊಂಡಾಡುವ ಬನ್ನಿ ಹರಿ ಮಹಿಪತಿ ಗುರು ತಾಯಿ ತಂದ್ಯೆನ್ನಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೆಡಗುಡಿ ಕಟ್ಟಿ ಹೊಡೆಯಿರಿ ಇವನ | ಬಡತನ ಸಂತರಿಗ್ಹೇಳುವನ ಪ ಸೆಡಗರದಲಿ ಸಂಸಾರವ ಮಾಡುತ ಬಿಡದಾಶೆಯಲೀ ಮರಗುವನ ಅ. ಪ ಅನ್ನವ ಬೇಡುವ ಅತಿಥಿಯು ಬಂದರೆ | ನಿನ್ನೆ ನಾ ಉಪವಾಸೆಂಬುವನ | ಅನ್ಯಾಯದಲಿ ಪಾಪವ ಗಳಿಸಿ |ನಾಯ್ ಕುನ್ನಿಯಂತೆ ಎಲ್ಲರ ಬೊಗಳುವನ 1 ವಸ್ತ್ರವ ಕೊಡು ಎಂದವರಿಗೆ ಹರಕೊಂ- | ದೊಸ್ತ್ರವ ತೆರೆದು ತೋರುವನ | ವೇಶ್ಯಾ ಸ್ತ್ರೀಯರ ಕಂಡರೆ ಕರೆದು | ಉತ್ತಮ ವಸ್ತ್ರವನೀಯುವನ 2 ಮಂತ್ರವ ಅರಿಯದೆ | ತಂತ್ರವ ಮಾಡುತ | ಅಂತರ ಪೂಜೆಯ ಅರಿಯದವನ | ಅಂತರಂಗದಿ ಭವತಾರಕನಂಘ್ರಿಯ | ಶಾಂತದಿಂದಲಿ ಧ್ಯಾನಿಸದವನ 3
--------------
ಭಾವತರಕರು