ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೂರತನವೇನೊ ಬಲು ನಾರಿ ಜನರು ನೀರೊಳಿರಲು ಪ ಸೀರೆಗಳ ಅಪಹರಿಸುತ ಬಲು ಶೌರಿ ಅ.ಪ ಸಾರಸವದನನೆ ಕಾರಣವಿಲ್ಲದೆ ನಾರಿಯರೆಮ್ಮನು ಸೇರಿ ಬಹಳ ಸರಸಗಳನ್ನು ತೋರಿ ಮಾನಸೂರೆಗೆಯ್ಯುವುದು ಭಾರಿ ನಡತೆ ಎಂದರಿತಿರುವಿಯೇನೊ 1 ಮುರಹರನೆ ಈ ಪರಿಯಲಿರುವ ಎಮ್ಮ ಕರಗಳ ಮುಗಿವುದು ತರವೇ ಬಹಳ ಮನ ಜರಿಯುವುದು ಸರಿಯೇ ಇಂತು ಕೋರುತಲಿರುವುದು ಮುರಳೀಧರನೆ ವಸನಗಳನು ಕೊಡೆಲೊ 2 ಬಿಸಜನಯನ ಇದು ಹೊಸ ಪರಿಯಲ್ಲವೆ ರಸಿಕ ಜನರು ಪರಿಹಾಸ ಮಾಡಿ ಮುಸಿ ಮುಸಿ ನಗುವರು ಶ್ರೀಶ ನಿನಗೆ ಪಸುಳೆ ಜನರ ಸಹ ವಾಸವೇ ಪ್ರಸನ್ನವದನ ಕೃಷ್ಣ 3
--------------
ವಿದ್ಯಾಪ್ರಸನ್ನತೀರ್ಥರು