ಒಟ್ಟು 6 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಪ್ಪಿಕೊಂಬೆ ರಂಗಯ್ಯನ ಎಂದಪ್ಪಿಕೊಂಬೆ ಪ ಎಂದಪ್ಪಿಕೊಂಬೆನೋ ಎಂದು ಮುದ್ದಾಡುವೆನಂದ ಕಂದನ ಗೋವಿಂದನೆಂಬುವ ಕೂಸ ಅ.ಪ. ಕರದಲಿ ತನ್ನಯ ಬೆರಳು ಬಾಯೊಳಗಿಟ್ಟುಜುರು ಜುರು ಚೀಪುವ ವರಮುದ್ದು ಬಾಲನ1 ಗುರುಳು ಮಧ್ಯದಿ ರತ್ನ ಅರಳೆಲೆ ಹೊಳೆಯುತಜರದ ಕುಂಚಿಗೆ ಹೊದ್ದು ಚರಿಸುವ ಕೂಸಿನ್ನ 2 ಪುಟ್ಟ ಪುಟ್ಹೆಜ್ಜೆಯನಿಟ್ಟು ಗೋಕುಲದೊಳುತುಷ್ಟಿ ನೀಡಲು ಬಾಲಕೃಷ್ಣನೆಂಬುವ ಕೂಸ 3 ಬಾಲೆರ ಮನೆಪೊಕ್ಕು ಪಾಲುಮೊಸರು ತಿಂದಲೀಲೆ ಮಾಡುತ ಅಂಬೆಗಾಲನಿಕ್ಕುವ ಕೂಸ 4 ಕಾಲಕಡಗ ರುಳಿಯ ಪೂಲು ಪೈಜಣನಿಟ್ಟುಮ್ಯಾಲೆ ಉಡುದಾರ ಪೊಳೆವಂಥ ಕೃಷ್ಣನ5 ತಂದೆ ತಾಯರ ಮುಂದೆ ನಿಂದು ಮಾತಾಡಿದನಂದ ಬಾಲಕನಾದ ಇಂದಿರೇಶನೆ ಬೇಗ 6
--------------
ಇಂದಿರೇಶರು
ಎಂದಪ್ಪಿಕೊಂಬೆ - ರಂಗಯ್ಯ ನಿನ್ನ |ಎಂದಪ್ಪಿಕೊಂಬೆ........................... ಪಎಂದಪ್ಪಿಕೊಂಬೆ ನಾನೆಂದು ಮುದ್ದಾಡುವೆ |ಎಂದಿಗೆ ಸವಿಮಾತನಾಡಿ ನಾ ದಣಿವೆನೊ ಅ.ಪಅರಳೆಲೆಮಾಗಾಯಿ ಕೊರಳ ಪದಕ ಸರ |ತರಳರನೊಡಗೂಡಿ ಬೆಣ್ಣೆಯ ಮೆಲುವನ............... 1ಅಂದುಗೆಪಾಯ್ವಟ್ಟು ಗೆಜ್ಜೆ ಘಿಲುಘಿಲು ಕೆನೆ |ಚೆಂದದಿ ಕುಣಿವ ಮುಕುಂದನ ಚರಣವ................ 2ಹೊನ್ನಿನ ಉಡುದಾರ ರನ್ನದ ಚೌಕುಳಿ |ಚಿನ್ನದುಂಗುರವಿಟ್ಟಜಾಹ್ನವಿಜನಕನ.......................3ಅಪ್ಪಣ್ಣ ಭಾಗವತನ ರೂಪವು ತಾನಾಗಿ |ತುಪ್ಪದ ಬಿಂದಿಗೆ ತಂದ ವಿಠಲನ...................... 4ಪರಿಪರಿ ಭಕುತರ ಮರೆಯದೆ ಸಲಹುವ |ಪುರಂದರವಿಠಲನ ಸಿರಿಪಾದ ಪದುಮನ 5
--------------
ಪುರಂದರದಾಸರು