ಒಟ್ಟು 9 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಗುರುವು ಬಂದನೆ ಏನಂತ ಅಂದನೆನಿನ್ನ ನೀನು ತಿಳಿದು ನೋಡೆನೀನೆ ನಾನು ಎಂದನೆ ಪ ಒತ್ತು ಮಡವನೆಂದನೆ ವಾಯು ಪೀಕೆಂದನೆಎತ್ತು ಸ್ವರವನೆಂದನೆ ಏರು ಮಾಳಿಗೆಂದನೆ 1 ಕೆರೆಯ ಮುಳುಗು ಎಂದನೆ ಕಾಣುಜ್ಯೋತಿ ಎಂದನೆಸುರಿವ ಸುಖವು ಎಂದನೆ ಸೂರೆ ಪ್ರಪಂಚೆಂದನೆ2 ಹಗರಣದಿಂದಂದನೆ ಹಮ್ಮಿನಿಂದಂದನೆಬಗೆಬಗೆಯಿಂ ಚಿದಾನಂದ ನೀನೇ ಬ್ರಹ್ಮ ಎಂದನೆ 3
--------------
ಚಿದಾನಂದ ಅವಧೂತರು
ಏನ ಮಾಡಲಿ ಎನ್ನ ರೋಗಕೆ ರಾಮ ಧ್ಯಾನದಮೃತವುಂಡು ಪೋಗ ಬೇಕಲ್ಲದೆ ಪ ಗೂಡಿನೊಳಗೆ ಜರೆ ಮುತ್ತಿತು ಅದಕೆ ಬಲ ಗೂಡಿ ರೋಗವು ಮತ್ತೆ ಪುಟ್ಟಿತು ಕಾಡಿನೌಷಧಿಯ ನಿತ್ಯ ಮಾಡುವ ಜಪತಪ ನಿಂತಿತು 1 ಯಾರಾರೇನೆಂದುದೆಲ್ಲವ ಮಾಚಿತು ಅದು ನಡೆಯೆಕಾಲುಬತ್ತಿತು ಶರೀರದೊಳಗೆ ಕ್ಷೀಣವಾಯಿತು 2 ವಾಂತಿ ಭ್ರಾಂತಿಗಳೆರಡಾಯಿತು ರೋಗ ಕಮಲಕಂಡಿತು ಕಾಲ ಬಂತೊ ಎಂಬಂತೆ ಮನವಾಯಿತು 3 ಹಿಂದೆ ಮಾಡಿದ ಪಾಪ ಬಂದಿತು ಈಗ ಮನದಿಹಂಬಲವಾಯಿತು ಇನ್ನು ಎಂದನೆಂದರೆ ದನಿ ಕುಂದಿತು 4 ಕಾಮನಯ್ಯನ ಚಿಂತೆ ಬಂದಿತು ರೋಗ ನಾಮಸ್ಮರಣೆಯಿಂದ ಹೋಯಿತು ಕ್ಷೇಮ ಕುಶಲಕೆಲ್ಲ ಭೀಮನ ಕೋಣೆ ಲಕ್ಷ್ಮೀರಮಣನಪ್ಪಣೆಯಿದ್ದಂತಾಯಿತು 5
--------------
ಕವಿ ಪರಮದೇವದಾಸರು
ನಿನ್ನ ನಾನೇನೆಂದೆನೊ | ಗುರುವೆ ಜಗದ್ಗುರುನಿನ್ನ ನಾನೇನೆಂದೆನೋ ಪ ನಿನ್ನ ನಾನೇನೆಂದೆ ನಿಖಿಲ ಜೀವರ ಒಡೆಯಪನ್ನಗ ನಗಧೀಶ ಪತಿತೋದ್ಧಾರನ ದೂತಅ.ಪ. ವಾರಿಧಿಯನೆ ದಾಟಿ | ನಾರಿ ಚೋರನ ಜರೆದುನಾರಿಗೋಸುಗ ಕೌರವರ ಸವರೀ ||ಮಾರಮಣನೆ ಸಾರತಮನೆಂಬ ವೇದಾಂತಸಾರ ಪೇಳ್ದಗೆ ಶರಣೆಂದೆನು ಅಲ್ಲದೇ ||ಭಾರಿ ಕೋತಿಯು ಎಂದೆನೆ - ಕುಪ್ಪುಸ ತೊಟ್ಟುನಾರಿಯಾದವನೆಂದೆನೆ - ಕಾವಿಯನುಟ್ಟುಪೋರಯತಿಯು ಎಂದನೆ - ಕುಭಾಷ್ಯಗಳಾರು ಮೂರೆರಡೊಂದರರಿ ಎಂದೆನಲ್ಲದೆ 1 ನೆರಹಿ ಕಪಿ ಸೈನ್ಯವ | ಶರಧಿಯ ಬಂಧಿಸಿದುರುಳ ರಕ್ಕಸರ ಸಂಹರಿಸೀ ||ಜರೆಯ ಸುತನ ಸೀಳಿ ಬದರೀಗೆತೆರಳೀದವಗೆ ನಮೋ ಎಂದನು ಅಲ್ಲದೇ ||ಗಿರಿಯ ಪೊತ್ತವನೆಂದನೆ - ರಕ್ಕಸಿಯಬೆರೆದ ನೆಂದವನೆಂದೆನೆ - ಕೌಪೀನವಧರಿಸಿದವನು ಎಂದೆನೆ - ಸುಜನರ್ಗೆಪರತತ್ವ ಪೇಳವನೆಂದೆನು ಅಲ್ಲದೆ 2 ಕರ್ತು ಹರಿಯೆ ಎಂದುನೀಚೋಚ್ಛ ತರತಮ ಪೇಳ್ದೆ ಎಂದೆಲ್ಲದೆ ||ಖೇಚರ ನೀನೆಂದೆನೆ - ವಿರಾಟನೊಳ್‍ಪಾಸಚಕ ನೀನೆಂದೆನೆ - ಭವಾಟವಿಮೋಚಕನೇ ಗುರು ಗೋವಿಂದ ವಿಠಲಅರ್ಚಕನೆಂದು ಸ್ತುತಿಗೈದೆನಲ್ಲದೆ 3
--------------
ಗುರುಗೋವಿಂದವಿಠಲರು
ಬಾಲಕನೆಂದೆತ್ತಿಕೊಂಡೆನೆ - ಗೋಪಾಲಕೃಷ್ಣನಬಾಲಕನೆಂದೆತ್ತಿಕೊಂಡೆನೆ ಪ ಬಾಲಕನೆಂದೆತ್ತಿಕೊಂಡರೆ - ವಾರೆ ಮಾಡಿ ಮೋರೆ ನೋಡಿಶ್ರೀಲತಾಂಗಿಯರ ಲೋಲ - ಮಾರನಾಟವಾಡಿ ಪೋದನೆ ಅ ಹೊತ್ತರೆದ್ದು ಮನೆಗೆ ಬಂದನೆ - ಯಶೋದೆ ಕೇಳೆ ಎತ್ತಿಕೊಂಡು ಮುತ್ತುಕೊಟ್ಟೆನೆಎತ್ತಿಕೊಂಡು ಮುತ್ತು ಕೊಟ್ಟರೆಮುತ್ತಿನ್ಹಾರ ಕೊರಳಿಗ್ಹಾಕಿಚಿತ್ತಜಾತ ಕೇಳಿಯಲ್ಲಿಬತ್ತಲೆ ನಿಂದೆತ್ತು ಎಂದನೆ1 ಗಂಡನಂತೆ ಮನೆಗೆ ಬಂದನೆ - ಯಶೋದೆ ಕೇಳೆಮಿಂಡನಂತೆ ಕಣ್ಣು ಹೊಡೆದನೆಪುಂಡಪೋಕರನ್ನು ಮೀರಿದುಂಡು ಕುಚಗಳನ್ನು ಪಿಡಿದುದಿಂಡುರುಳಿಸಿ ಒಂದುಸರಲಿಬಂಡನುಂಡು ಹಾರಿ ಪೋದನೆ 2 ಏಸು ಮೋಸ ಕಲಿತ ಜಾಣನೆ - ಯಶೋದೆ ಕೇಳೆವಾಸುದೇವ ಮಾಯಕಾರನೆಹಾಸುಮಂಚದ ಹಾಸುಗೆಯಲಿತೋಷದಿಂದ ಬಾಚಿ ಸೆಳೆದುಶೇಷನನ್ನು ಪೂಜಿಸೆಂದಶ್ರೀಶ ಬಾಡದಾದಿ ಕೇಶವ 3
--------------
ಕನಕದಾಸ
ಯೋಗ ಯೋಗಗಳೆಂದು ಕಸಿವಿಸಿ ತಾನೇಕೆಯೋಗವು ತಾನದೆ ಬಂಧಯೋಗವ ಬಿಟ್ಟು ತನ್ನನೆ ಬ್ರಹ್ಮನೆಂದೆನೆಯೋಗವೆ ರಾಜಯೋಗವೆಂದಪವ್ರತನೇಮ ಶೌಚದಿ ಮುಕ್ತಿಯು ಎಂದನೆವ್ರತನೇಮ ಶೌಚವು ಬಂಧಪ್ರತಿಯಿಲ್ಲದಾ ವಸ್ತು ತಾನೆಂದು ಚಿಂತಿಸೆಅತಿರಾಜಯೋಗವೆಂತೆಂದ1ಮೂರ್ತಿಧ್ಯಾನಷ್ಟಾಂಗದಲಿ ಮುಕ್ತಿಯೆಂದನೆಮೂರ್ತಿಧ್ಯಾನಷ್ಟಾಂಗ ಬಂಧಕರ್ತೃನಾ ಸರ್ವ ಕಾರಣವೆಂದು ಚಿಂತಿಸೆಕರ್ತೃರಾಜಯೋಗವೆಂದ2ಲಯ ಲಕ್ಷದಿಂದ ಮುಕ್ತಿ ಎಂದೆನೆಲಯ ಲಕ್ಷ ತಾನದು ಬಂಧಸ್ವಯಂ ಬ್ರಹ್ಮವೆಂದು ತಾನೆ ಚಿಂತಿಸಿನಿಯಮವು ರಾಜಯೋಗವೆಂದ3ಖೇಚರಿ ಭೂಚರಿಯಲಿ ಮುಕ್ತಿ ಎಂದೆನೆಖೇಚರಿ ಭೂಚರಿ ಬಂಧವಾಚಾತೀತ ವಸ್ತು ತಾನೆಂದು ಚಿಂತಿಸೆಗೋಚರ ರಾಜಯೋಗವೆಂದ4ಎರಡಕ್ಕೆ ತಾವಿಲ್ಲ ಇಹನೊಬ್ಬನೇ ತಾನೇಎರಡಾಗಿ ಕಾಂಬುದೊಂದೇ ಬಂಧಗುರುಚಿದಾನಂದನ ಸಾಕ್ಷಾತ್ಕಾರವೆಂದೆನೆಗುರಿಯದು ರಾಜಯೋಗವೆಂದ5
--------------
ಚಿದಾನಂದ ಅವಧೂತರು