ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗವಾಲಿಯನಿಡು ತಂಗಿ ನಿನ್ನಂತರಂಗ ದಂಗಳ ಸಾರಿಸಿ ರಂಗಗರ್ಪಿತವೆಂದು ಪ. ಮಂಗಳಮಹಿಮ ಶ್ರೀ ಕೃಷ್ಣ ತನ್ವಲಿವ ಎಂದಂಗನೆ ಸುಭದ್ರೆಗೆ ರಂಗಹೇಳಿದ ಅ.ಪ. ಅರಿಷಡ್ವರ್ಗಹಂಕಾರ ಮದಗಳೆಂಬ ಮಮಕಾರವ ಬಿಟ್ಟು ಮುನ್ನ ತೊಡರಬಿಡಿಸಿ ನಿನ್ನ ಕಡೆಹಾಯಿಸುವ ಪಥ ದೊಡೆಯ ಶ್ರೀಧರಪಾದವದರೊಳು ನಿಲುವಂತೆ 1 ಶ್ವೇತ ಕಲ್ಲನೆ ಕುಟ್ಟಿ ಅಚ್ಚುತನಾಮ ಪವಳ ಬೆರಸಿ ಸ್ವಚ್ಛ ಮುತ್ತುಗಳೆಂಬಂಥ ಶೀಲತೆಯಿಂದ ಅಚ್ಚ ಶ್ರೀ ತುಳಸಿಯ ಕಟ್ಟೆಯ ಬೆಳಗುವಂಥ2 ಹರಿನಾಮದರಿಶಿನವದರ ಮಧ್ಯದಿ ತುಂಬಿ ಅರಿಗಳ ಕಡಿವಂಥ ಕುಂಕುಮವ ಪರಮಾನಂದದಿನೆಲ್ಲಿ ಕರಿಯ ಬಣ್ಣ ಹರುಷದಗಸೆ ಹಸುರ ಬೆರಸಿ ಶ್ರೀ ಶ್ರೀನಿವಾಸಗೆ 3
--------------
ಸರಸ್ವತಿ ಬಾಯಿ