ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾದೋ ಶ್ರೀ ವೈಕುಂಠವೆಂಥಾದೋ ಪ ಕಂತುಪಿತನ ದೇಹಕಿರಣ ಅದ ರಂತರಂಗ ಹೇಮಾಭರಣ ಕಾಂತಿ ಗಂತು ನಾಚಿದ ರವಿ ಅರುಣ ಅಹಾ ನಂತ ಕಾಲದಲ್ಲಿ ಸಂತತ ತುತಿಪರ್ಗೆ ಪ್ರಾಂತಕ್ಕೆ ನಾಲ್ಕು ನಿಶ್ಚಿಂತ ಮುಕ್ತಿಯ ಸ್ಥಾನ 1 ಪಾಲಸಾಗರ ಮಧ್ಯೆ ಕೂಟ ಒಳ ಗೇಳು ಸುತ್ತಿಸಾಗರ ದಾಟಿ ತಾಳ ಮೇಳದವರು ಮೂರುಕೋಟಿ ನಾಮ ಪೇಳ್ವ ಗಾಯಕರ ಗಲಾಟೆ ಆಹ ಶೀಲ ಮುನಿಗಳು ದೇವ ಗಂಧರ್ವರು ಜೀವನ್ಮುಕ್ತರುಗಳು ಸೇರಿಪ್ಪ ಹರಿಪುರ2 ಹೇಮ ಪ್ರಾಕಾರದ ಪುರವು ಅಲ್ಲಿ ಆ ಮಹ ಬೀದಿ ಶೃಂಗಾರವು ನೋಡೆ ಕಾಮಧೇನು ಕಲ್ಪತರುವು ಬಲು ರಮಣೀಯವಾದ ಇರವು ಆಹಾ ಶ್ರೀ ಮೂರುತಿಯೊಂದು ವೇದಾಂತಶ್ರುತಿ ಸಾರೆ ಆ ಮಹಮುಕ್ತರು ಸೇರಿಹ ಮಂದಿರ 3 ಸುತ್ತಲು ಸನಕಾದಿ ಮುನಿಯ ದಿವ್ಯ ನರ್ತನ ಗಾಯನ ಧ್ವನಿಯು ಪುಷ್ಟ ವೃಷ್ಟಿ ಚಂಪಕ ಜಾಜಿ ಹನಿಯು ಅಲ್ಲಿ ಅಷ್ಟಮ ಸ್ತ್ರೀಯರ ಮನೆಯು ಆಹಾ ಪಾದ ಸಂ ಪತ್ತಿಗೀ ಶಯನ ಸರ್ವೋತ್ತಮನ ಗೃಹ 4 ಥಳಥಳಿಸುವ ದಿವ್ಯದ್ವಾರ ಅಲ್ಲಿ ಹೊಳೆವಂಥ ರಂಗಮಂದಿರ ಮುತ್ತಿ ಭಾರ ಹೇಮ ತುಳಸಿ ಸರದ ಶೃಂಗಾರ ಆಹಾ ಹೊಳೆವ ಮಾಣಿಕದ ಮಂಟಪ ಮಧ್ಯದೊಳ್ಮೆರವ ಚೆಲುವ ಜಗನ್ನಾಥ ವಿಠಲನ ನಿಜಸ್ಥಾನ 5
--------------
ಜಗನ್ನಾಥದಾಸರು