ನೋಡಮ್ಮಮ್ಮಾ ಎಂಥವನಿವಾ ಚಿನ್ನನೆ|
ಗೋಪಿಯ ಕಂದಾ ಅಂತವ ದೋರಗುಡನೆ ಪ
ಸಗಟನ ಮುರಿದೊತ್ತಿದ|ಮೊಲೆಯ ಕೊಟ್ಟ|
ಮುಗುದೆಯ ಪ್ರಾಣ ಹೀರಿದಾ 1
ವಿಷಮಡು ಕಲಕಿದನೆ|ಕಾಳಿಂಗನಾ|
ವಸುಧೆಗೆ ಎಳೆತಂದನೆ 2
ಪಶುಪಕ್ಷಿ ಮೃಗಾಂಗನೇರು|ಕೊಳಲಧ್ವನಿಗೆ|
ನಿಸಿದಿನಿ ಮರುಳಹರು3
ತಿನಬ್ಯಾಡಮಣ್ಣವೆಂದರೆ|ಬಾಯೊಳು ಜಗವ|
ದೋರಿದ ಜನ ಬೆದರೆ 4
ತಂದೆ ಮಹಿಪತಿ ಸ್ವಾಮಿಯ|ಹೇಳಲಿ ನಾನು
ಒಂದೆರಡೆಂದು ಲೀಲೆಯ 5