ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥವ ನಿವನಮ್ಮಾ ಬಾಲಕನಂತಿಹ ಗೋಪೆಮ್ಮಾ ಎಂಥವನಿವ ತನ್ನಂತತ ನ್ನಂತದೋರ ಗುಡದ ನಂತ ಮಹಿಮ ನರಕಾಂತಕ ದೇವಾ ಪ ವಾರಿಯೊಳಗ ಮನವಾರಿ ಕ್ರೀಡಿಸುತಿರೆ ಘೋರ ಪ್ರವಾಹದಿ ತೀರದಲೆಮ್ಮಾ ಆರು ಅರಿಯದಂತೆ ಸೀರೆನೆಗೆದು ಕೊಂಡು ಗಾರು ಮಾಡಿದ ಮರ ಸೇರಿದ ಕಾಣಮ್ಮಾ ನಾರೇರೆಲ್ಲರು ಕೂಡಿ ಸೀರೆ ಬೇಡಲು ಬಿಟ್ಟು ನೀರ ಮುಗಿದು ಕೈಯ್ಯದೋರೆರಡೆನವಾ 1 ಪುಣ್ಯ ಚರಣೆಸಳ ಗಣ್ಣ ಜಲಧರದ ಬಣ್ಣದ ಲೋಪ್ಪವ ಸಣ್ಣಪನೆಂದು ಬಣ್ಣಿಸಿ ಕರುವುತ ಹೆಣ್ಣೆಂದೊಪ್ಪುವ ತಿಣ್ಣ ಮೊಲೆಗಳನು ಉಣ್ಣೆಂದೂಡಿದಾ ಸಣ್ಣಿಸಿ ಕಳೆದ ಮುಕ್ಕಣ್ಣನ ಸಹಿನು2 ಇಂದು ವದನೆಯರು ಮುಂದಕ ಕದವನು ತಂದಿಕ್ಕಿ ಪೋಗೆರೆ ಮಂದಿರದಿಂದಾ ಸಂದಿಸ್ಯಾಗಳೆ ಆಂದದಿ ಗೋವಳ ವೃಂದ ನೆರಹಿಕೊಂಡು ಬಂದು ನೋಡಮ್ಮಾ ಛಂದದಿ ಬೆಣ್ಣೆಯನಿಂದು ಸೇವಿಸುತಿಹ ತಂದೆ ಮಹಿಪತಿ ನಂದನೋಡಿಯನು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಮ್ಮಮ್ಮಾ ಎಂಥವನಿವಾ ಚಿನ್ನನೆ| ಗೋಪಿಯ ಕಂದಾ ಅಂತವ ದೋರಗುಡನೆ ಪ ಸಗಟನ ಮುರಿದೊತ್ತಿದ|ಮೊಲೆಯ ಕೊಟ್ಟ| ಮುಗುದೆಯ ಪ್ರಾಣ ಹೀರಿದಾ 1 ವಿಷಮಡು ಕಲಕಿದನೆ|ಕಾಳಿಂಗನಾ| ವಸುಧೆಗೆ ಎಳೆತಂದನೆ 2 ಪಶುಪಕ್ಷಿ ಮೃಗಾಂಗನೇರು|ಕೊಳಲಧ್ವನಿಗೆ| ನಿಸಿದಿನಿ ಮರುಳಹರು3 ತಿನಬ್ಯಾಡಮಣ್ಣವೆಂದರೆ|ಬಾಯೊಳು ಜಗವ| ದೋರಿದ ಜನ ಬೆದರೆ 4 ತಂದೆ ಮಹಿಪತಿ ಸ್ವಾಮಿಯ|ಹೇಳಲಿ ನಾನು ಒಂದೆರಡೆಂದು ಲೀಲೆಯ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಹರಿಸ್ತುತಿ ಗೋಪಿ ನಿನ್ನ ಮಗ ಪ ಯಥೇಷ್ಟ ಮಾಡುವ ಈ ಕಳ್ಳ ಕೃಷ್ಣನು ಅ.ಪ ಅಡಗಿ ಮನೆಯೊಳಡಗಿಕೊಂಡಿರುವ ಅಲ್ಲಿದ್ದ ಭಾಂಡಗಳ್ ಬುಡಮೇಲ್ ಮಾಡಿ ಅಡಕಲೇರಿಸುವಾ ಅಡಿಗಳನು ಮೆಲ್ ನಿಡುತ ನೆಲವಿಲಿ ಇಡುವ ಪಾಲ್ ಮೊಸರನೆಲ್ಲ ಸವಿಯುವ ಗಡನೆ ಗೆಳೆಯರ ನೊಡನೆ ಬಂದು ಕಡೆವ ಗಡಗಿಯ ನೊಡೆದು ಪೋಗುವಾ 1 ಸಿಕ್ಕಮನೆ ಮನೆ ಹೊಕ್ಕು ನೋಡುವನೆ ತಾ ಸಿಕ್ಕದಿರನು ತಕ್ಕ ಕಳ್ಳಿವ ಠಕ್ಕನಾಗಿಹನು ಅಕ್ಕ ಕೇಳೆÀ ಅಕ್ಕರದಿ ಕೈಯಿಕ್ಕಿ ಕಡೆದಿಹ ಚೊಕ್ಕ ಬೆಣ್ಣೆಯ ಚಿಕ್ಕ ಬಾಲರಿಗಿಕ್ಕಿ ತಿನ್ನುವ ಮಿಕ್ಕ ಬೆಣ್ಣೆಯ ಬೆಕ್ಕಿಗ್ಹಾಕುವ 2 ಎಂಥವನಿವ ಖಳರಂತೆ ಮಾಡುವನೆ ಬೇ ಕಂತೆ ಕರುಗಳ ತಂತುಬಿಚ್ಚಿ ನಿಂತುನೋಡುವನೆ ಅಂಥ ಇಂಥವನಲ್ಲ ನಿನ್ನ ಮಗ ಸಂತ ಜನಮನ ದಂತರಂಗನು ಕಾಂತೆಯರು ಮನದಂತೆ ಬೈದರೆ ನಿಂತು ನಗವಾನಂತಾದ್ರೀಶನು 3
--------------
ಅನಂತಾದ್ರೀಶರು