ಎಂತೊಲಿವನೋ ತನಗಿನ್ನೆಂತೊಲಿವನೋ
ಕಂತುಪಿತ ಶ್ರೀಕಾಂತ ಹರಿ ಪ
ಜಡಮನದ ಜಡರು ತೊಡೆದು
ಪಿಡಿದು ಸತ್ಯ ನುಡಿಯ
ಬಿಡದೆ ಅಡರಿಬರುವ ಎಡರಿಗೆದೆ
ಒಡೆಯದೆ ಧೃಢಬಲಿಸುವನಕ 1
ದೋಷದೆಳಿಪ ಹೇಸಿ ಭವದ
ವಾಸನಳಿದು ಕ್ಲೇಶನೀಗಿ
ದಾಸಜನರ ವಾಸದಿರ್ದು
ಈಶಭಜನೆ ಬಲಿಸುವನಕ 2
ಕಾಮಿತಾರ್ಥನೀಗಿ ನಿತ್ಯ
ನೇಮಬಿಡದೆ ತಪವ ಮಾಡಿ
ಸ್ವಾಮಿದಾಸನಾಗಿ ಶ್ರೀ
ರಾಮಮಂತ್ರ ಪಡೆಯುವನಕ 3