ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನಪಾದ ದೊರಕುವುದು ಎಂತೆನಗೆ ರಂಗ ಗನ್ನಗತಕ ನಾನು ಪುಣ್ಯದ್ಹಾದ್ಯರಿಯೆ ಪ ಕಳ್ಳನಾಗಿ ಜೀವಿಸಿದೆ ಸುಳ್ಳನಾಡಿ ನಾ ದಣಿದೆ ತಳ್ಳಿಕೋರತನದನ್ಯರ್ಹಾಳು ಮಾಡಿದೆನೊ ಖುಲ್ಲತನದಿಂ ಪರರ ನಲ್ಲೆಯರೋಳ್ಮನಸಿಟ್ಟು ಕ್ಷುಲ್ಲಕನಾದೆ ನಾನೆಲ್ಲಿ ನೋಡಲವ 1 ಅನ್ನಕೊಟ್ಟವರಿಗೆ ಅನ್ಯಾಯಯೋಚಿಸಿದೆ ಬನ್ನ ಬಡಿಸಿದೆನಯ್ಯ ನನ್ನನಂಬಿದವರ ಎನ್ನ ಪಡೆದವರನ್ನು ಮನ್ನಿಸಿನೋಡಿಲ್ಲ ನಿನ್ನ ಧ್ಯಾನದ ಖೂನವನ್ನರಿಯೆ ದೇವ 2 ಗುರುಹಿರಿಯರನು ಜರಿದೆ ಪರಿಪರಿಯಲಿ ನಾನು ಪರರಿಗೊಂದಿಕ್ಕಿ ನಾನುಂಡಿರುವೆನೊಂದು ಧರೆಯೊಳೆಣೆಯಿಲ್ಲದ ದುರಿತವನು ಗಳಿಸಿರುವೆ ಕರುಣಾಳು ಶ್ರೀರಾಮ ನೀನೆ ಪೊರಿಬೇಕೊ 3
--------------
ರಾಮದಾಸರು