ಯೋಗದರ್ಶನ
ಎಂತುಗೂಡುವದೊ ನಿಜ ಹರಿಯೆ ಧ್ರುವ
ನಿದ್ರ್ವಂದ್ವದಲಿದ್ದ ಒಂದೆ ವಸ್ತುವೆ ನೀನು
ದ್ವಂದ್ವಾಭೇದದ ಸಂದೇಹಿ ನಾನು
ಅಂದಿಗಿಂದಿಗೆ ಪೂರ್ಣ ಎಂದೆಂದಿಗೆ ನೀನು
ಹೊಂದಲರಿಯದಾ ತಿಮಿರಾಂಧ ನಾನು ಹರಿ 1
ನಿಃಪ್ರಪಂಚದ ನಿರ್ಮಳ ನಿರ್ಗುಣನು ನೀನು
ಪ್ರಾಪಂಚಿಕ ಪರಮ ನಾನು
ಕೃಪೆಯುಳ್ಳ ಕರುಣಾಕಾರ ಪರಿಪೂರ್ಣ ನೀನು
ಕಪಟ ಕುಟಿಲಲಿಹ ಪ್ರಾಣಿ ನಾನು ಹರಿ 2
ಮಹಿಗೆ ಪತಿಯಾದ ಸ್ವಾಮಿ ಶ್ರೀಪತಿ ನೀನು
ಸೋಹ್ಯ ತಿಳಿಯದಾ ಮಂದಮತಿ ನಾನು
ಸಾಹ್ಯ ಮಾಡುವ ಸಹಕಾರ ಸದ್ಗತಿ ನೀನು
ಮಹಾಮಹಿಮೆಯುಳ್ಳ ಮೂರುತಿ ನೀನು 3