ಎಂಥಾದರು ಬಂದರು ಚಿಂತೇ ಇಲ್ಲಾ ಪಂಥವು ಸರಿಯಲ್ಲಾ ಪ
ಚಿಂತೆ ಎಂದೆಂಬುದೆ ಮನಸಿನ ರೋಗಾ ಸಂತಸ ಸಂತ್ಯಾಗ
ಎಂಥೆಂಥ ಮಿಂಚುವ ದೇಹವಿದೀಗ ಕೃಂತನ ವಿಧಿಭಾಗ
ಎಂತಲ್ಲಿ ನೆಲೆಸಿ ಹವಣಿತ ರೋಗಾ ಸಂತತ ಜಡ ಬೀಗಾ
ನೀ ನೆನ್ನೊ 1
ಹಿತಾಹಿತವೆಂದಿಗೂ ಕೈಶೇರಿಲ್ಲಾ ಕೃತಿಪತಿ ತಾ ಬಲ್ಲಾ
ಮತಿಗೆಟ್ಟು ಸತಿಯೇ ಗತಿಯೆಂದೆಲ್ಲಾ ಸುತಮೋಹ ಬಿಡಲಿಲ್ಲಾ
ಮಿತಿಮೀರಿ ಪಣ ಭಂಡಾರದೊಳೆಲ್ಲಾ ರತಸುಖರೆ ಡಿಲ್ಲಾ
ಕೇಸರಿ ಸುಖಗುರಿ ಮುರಿಯಲು ಧೃತಿಗೆಟ್ಟು ಬಳಲುವ
ಸಂಗತಲ್ಯಾರು ತಿಳಿಯೋ 2
ನೀರಿನ ಬುದ್ಬುದ ಪರಿಸಂಸಾರಾ ದುಃಖದ ಆಗಾರಾ
ಶ್ರೀರಾಮ ಮಂತ್ರದ ಸಾರಾ ನಿಜ ಸೌಖ್ಯದ ದ್ವಾರಾ
ಶೇರಿ ಹಣ ಹೊನ್ನು ಹೆಂಣ ವಿಚಾರಾ ಗಂಜಾಸಮ ತಾರಾ
ನಿಜಸುಖವನು ಪಡೆಯೇ 3