ನಿನ್ನೊಳಗಿರಿಸೆನ್ನ ಚಿತ್ತ ಚೆಲ್ವ
ಪನ್ನಗಶಯನ ಶ್ರೀ ಆದಿರಂಗಯ್ಯ ಪ
ಪರನನ್ನೊಳಗೆ ನಾ ಕಂಡು ನಿನ್ನೊಳಗೆ ನಾನೈಕ್ಯ
ಇನ್ನೆಂದಿಗಾಗುವುದೊ ಇನಕುಲದ ಮಣಿಯೆ 1
ಎಂಟಾರರೊಳಗೆನ್ನ ಅಂಟಲೆಸಗೊಡಬೇಡ
ಭಂಟನಾಗಿರು ವೈಕುಂಠನಾಯಕನೆ 2
ಕಾಕುಲದ ಕತ್ತಲೆಗೆ ನೂಕದಿರು ನೀಯೆನ್ನ
ಏಕನಾಯಕನೆ ಕೇಳಿದು ಸತ್ಯಸಿದ್ಧಂ 3
ದೇಶಿಕಾಯೇನಮಃ ದಾಸನಗಿರುತಿರುವೆ
ದೋಷರಹಿತಾಗುರುವು ಶ್ರೀತುಲಶಿರಾಮಾ 4