ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡೆನೊ ನಿನ್ನಂಘ್ರಿ ಶ್ರೀನಿವಾಸ ನನ್ನದುಡಿಸಿಕೊಳ್ಳೆಲೊ ಶ್ರೀನಿವಾಸ ನಿನ್ನುಡಿಯ ಜೀತಲ್ಲೊ ಶ್ರೀನಿವಾಸ ನನ್ನನಡೆ ತಪ್ಪು ಕಾಯೊ ಶ್ರೀನಿವಾಸ ಪ.ಬಡಿಯೊ ಬೆನ್ನಲಿ ಶ್ರೀನಿವಾಸ ನನ್ನೊಡಲ ಹೊಯ್ಯದಿರೊ ಶ್ರೀನಿವಾಸ ನಾಬಡವ ಕಾಣೆಲೊ ಶ್ರೀನಿವಾಸ ನಿನ್ನೊಡಲ ಹೊಕ್ಕೆನೊ ಶ್ರೀನಿವಾಸ 1ಪಂಜುವಿಡಿವೆನೊ ಶ್ರೀನಿವಾಸ ನಿನ್ನೆಂಜಲ ಬಳಿದುಂಬೆ ಶ್ರೀನಿವಾಸ ನಾಸಂಜೆ ಉದಯಕೆ ಶ್ರೀನಿವಾಸ ಕಾಳಂಜಿಯ ಪಿಡಿವೆನೊ ಶ್ರೀನಿವಾಸ 2ಸತ್ತಿಗೆ ಚಾಮರ ಶ್ರೀನಿವಾಸ ನಾನೆತ್ತಿಕುಣಿವೆನೊ ಶ್ರೀನಿವಾಸ ನಿನ್ನರತ್ತುನ ಹಾವಿಗೆ ಶ್ರೀನಿವಾಸ ನಾಹೊತ್ತು ನಲಿವೆನೊ ಶ್ರೀನಿವಾಸ 3ಹೇಳಿದಂತಾಲಿಹೆ ಶ್ರೀನಿವಾಸ ನಿನ್ನಾಳಿಗಾಳಾಗಿಹೆ ಶ್ರೀನಿವಾಸ ಅವರೂಳಿಗವ ಮಾಳ್ಪೆ ಶ್ರೀನಿವಾಸ ನನ್ನಪಾಲಿಸೊ ಬಿಡದೆ ಶ್ರೀನಿವಾಸ 4ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳಕುನ್ನಿ ನಾನಾಗಿಹೆ ಶ್ರೀನಿವಾಸಕಟ್ಟಿನಿನ್ನವರೊದ್ದರೆ ಶ್ರೀನಿವಾಸ ನನಗಿನ್ನು ಲಜ್ಜ್ಯಾತಕೆ ಶ್ರೀನಿವಾಸ 5ಬೀಸಿ ಕೊಲ್ಲಲವರೆ ಶ್ರೀನಿವಾಸ ಮುದ್ರೆಕಾಸಿ ಚುಚ್ಚಲವರೆ ಶ್ರೀನಿವಾಸ ಮಿಕ್ಕಘಾಸಿಗಂಜೆನಯ್ಯ ಶ್ರೀನಿವಾಸ ಎಂಜಲಾಸೆಯಬಂಟನಾ ಶ್ರೀನಿವಾಸ6ಹೇಸಿ ನಾನಾದರೆ ಶ್ರೀನಿವಾಸಹರಿದಾಸರೊಳು ಪೊಕ್ಕೆ ಶ್ರೀನಿವಾಸಅವರಭಾಸೆಯ ಕೇಳಿಹೆ ಶ್ರೀನಿವಾಸ ಆವಾಶೆಯ ಸೈರಿಸೊ ಶ್ರೀನಿವಾಸ 7ತಿಂಗಳವನಲ್ಲ ಶ್ರೀನಿವಾಸವತ್ಸರಂಗಳವನಲ್ಲೊ ಶ್ರೀನಿವಾಸ ರಾಜಂಗಳ ಸವಡಿಪೆ ಶ್ರೀನಿವಾಸ ಭವಂಗಳ ದಾಟುವೆ ಶ್ರೀನಿವಾಸ 8ನಿನ್ನವ ನಿನ್ನವ ಶ್ರೀನಿವಾಸ ನಾನನ್ಯವನರಿಯೆನೊ ಶ್ರೀನಿವಾಸ ಅಯ್ಯಾಮನ್ನಿಸೊ ತಾಯ್ತಂದೆ ಶ್ರೀನಿವಾಸ ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ 9
--------------
ಪ್ರಸನ್ನವೆಂಕಟದಾಸರು