ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುರುಕರು ಕರೆದರೆ ಉಣಬಹುದಣ್ಣ |ತುರುಕರು ಕರೆದರೆ ಉಣಬಹುದು .......... ಪ.ಕರ ಕರೆ ಚಂಚಲ ಮಾಡದಿರಣ್ಣ |ತುರುಕರು ಕರೆದರೆ ಉಣಬಹುದು ಅಪತುರುಕರುವಿಂದ ಮುಟ್ಟು ಮುಡಚಟ್ಟು ಹೋಹುದು |ತುರುಕರುವಿಂದ ಹೋಹದು ಎಂಜಲವು ||ತುರುಕರು ಕಂಡರೆಸರಕನೆ ಏಳಬೇಕು |ತುರುಕರುವಿನ ಮಂತ್ರ ಜಪಿಸಬೇಕಣ್ಣ.............. 1ತುರುಕರುವಿಂದ ಸ್ವರ್ಗ ಸ್ವಾಧೀನವಾಹುದು |ತುರುಕರುವಿಂದ ನರಕ ದೂರಪ್ಪುದು ||ತುರುಕರು ಕೂದಲ ತುರುಬಿಗೆ ಸುತ್ತಿಕೊಂಡು |ಗರತಿಯರೆಲ್ಲ ಮುತ್ತೈದೆಯರಣ್ಣ.......... 2ತುರುಕರುವಿನ ನೀರೆರಕೊಂಡ ನಮ್ಮ ದೇವ |ಉರವಕೊಂಡ ನೀರೆಲ್ಲ ಸನಕಾದಿಗೆ ||ಬೆರಕೆಯ ಮಾಡಿದ ಪುರಂದರವಿಠಲ |ಅರಿಕೆಯ ಮಾಡಿದ ಹರಿದಾಸರಿಗೆಲ್ಲ......... 3
--------------
ಪುರಂದರದಾಸರು