ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುಂಡನಾದೆನು ನಾನು ಭಂಡ ಮನುಜಾ ಕಂಡವರಲ್ಲಿಯುಂಡು ಎಂಜಲವನು ಪ ಪುಂಡರೀಕಾಕ್ಷ ಶ್ರೀ ಕೃಷ್ಣಗರ್ಪಿಸದೆಡೆ- ಯುಂಡರದು ಬುಧರರಿವರೆಂಜಲಂದು ತುಂಡ ಜನರಿಂಧನ್ನ ಮುದ್ದು ಮೆರೆದರು ಕೊಬ್ಬಿ ಕಂಡಿವರೊಳಾದರದಿ ಸವಿಯಗೊಂಡನು ದೇವಾ 1 ಲಿಂಗಭವನೈಯ್ಯ ನಿನ್ನೊಲಿಮೆ ಮರೆಯನು ನಾನು ಮಂಗಳಾಂಗಿಯ ಮೊರೆ ಕೇಳ್ದು ಭರದಿ ಭಂಗ ಬಹುದೆಂದು ಕಾನನದಿ ಎಂಜಲನುಂಡು ಅಂಗರಕ್ಷಕನಾಗಿ ಪಾಂಡವರ ಪೊರೆದಿ ಧೊರಿಯೆ 2 ಸರಸಿಜಾಕ್ಷನೆ ನಿನ್ನ ಕರುಣಪಾತ್ರನು ನಾನು ಅರಿಯದುಡಿದನು ತೀಕ್ಷಮಿಪುದೀಗ (?) ಸುರನಿರಲಿ ನರನಿರಲಿ ಪತಿತನಾದವನಿರಲಿ ಸರಿಯಾಗಿ ಕರುಣಿಸುವಿ ನರಸಿಂಹವಿಠಲ 3
--------------
ನರಸಿಂಹವಿಠಲರು
ಪುರಂದರದಾಸರು ಜಿಪುಣರೈ ನೀವೆಂದು ಹೇಳಿದುದು ಸುಳ್ಳಲ್ಲ ಪ ಪುರಂದರ ದಾಸಮಲ್ಲ ಅ.ಪ. ಘನತರದ ವೈರಾಗ್ಯ ತಳೆದು ದ್ವಿಜರಿಗೆಲ್ಲಧನಕನಕ ಸಂಪತ್ತು ದಾನ ಮಾಡಿದರೆಲ್ಲವನಜನಾಭನ ಸ್ತುತಿಗೆ ಶಬ್ದ ಸಂಪತ್ತೆಲ್ಲಒಸೆದು ನೀವೇ ಬಳಸಿ ನನಗೇನು ಕೊಡಲಿಲ್ಲ 1 ಖಂಜೂತನದ ಕಥೆಯನು ಹೇಳಲಾಸಲ್ಲಕಂಜನಾಭನ ಮಹಿಮೆ ಬಣ್ಣಿಸುವ ನೆವದಲ್ಲಿರಂಜನೆಯ ಶಬ್ದಗಳ ಸವಿದುಂಡೆಯಲ್ಲಿಎಂಜಲವನುಳಿದೆನಗೆ ಕಿಂಚಿತ್ತು ಬಿಡಲಿಲ್ಲ 2 ಕೃಪೆಮಾಡಿ ಕ್ಷಮಿಸುವುದು ವಿಪುಲ ಭಕ್ತಿಗಳಿಂದಜಪತಪದಿ ಕನ್ನಡದ ನಿಮ್ಮ ಭಾರತಮಲ್ಲ ಕೃಪಣವತ್ಸಲ ಗದುಗು ವೀರನಾರಾಯಣನ ಸಫಿಲ ಜ್ಞಾನವ ಗಳಿಸಿ ನಮಗೇನು ಕೊಡಲಿಲ್ಲ 3
--------------
ವೀರನಾರಾಯಣ