ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರದೇಂದ್ರವಿಠಲರ ಹಾಡು ವಾಸುದೇವನ ಪುರ ಪ್ರವೇಶಿಸಿದರು |ಈಶ ಭಜಕ ಶ್ರೀಶ ಪ್ರಾಣೇಶದಾಸಾರ್ಯ ಪ ಉತ್ತಂಕ ಋಷಿಯಂತೆ ಉತ್ತಮ ಗುರುಪಾದ |ಅತ್ಯಂತ ಭಕ್ತಿಯಿಂ ಸ್ತುತಿಸಿ ಯಜಿಸಿ ||ಉತ್ತಮ ಶ್ಲೋಕ ಶ್ರೀ ಪುರುಷೋತ್ತಮನ ಗುಣವ |ನೃತ್ಯ ಗೀತದಿ ಪಾಡಿ ಮೃತ್ಯಲೋಕವ ತ್ಯಜಿಸಿ 1 ವಾಸ ವಾಸರದಲಿ ವಾಸುದೇವನ ಕಥೆಯ |ಭೂಸೂರರಿಗೆ ಪೇಳಿ ತೋಷದಿಂದ ||ವಾಸವಾದ್ಯಮರ ವಂದಿತನ ಪಾದದಿ ಭಕ್ತಿ |ಲೇಸಾಗಿ ತೋರಿ ಭವಕ್ಲೇಶವನು ಪರಿಹರಿಸಿ 2 ಅಬ್ಧನಂದನ ಭಾದ್ರಪದ ತಿಥಿ ಅಷ್ಟಮಿಯ |ಶುದ್ಧ ಭೌಮ್ಯವಾಸರದ ಉಷಃಕಾಲದಿ ||ಮುದ್ದು ಪ್ರಲ್ಹಾದನ್ನ ಪೊರೆದ ನರಹರಿರೂಪ |ಹೃದ್ಗುಹಾದಲಿ ನೋಡಿ ಹರುಷವನು ಬಡುತಲಿ 3 ದಾಸ ಕುಲ ಶ್ರೇಷ್ಠ ಗುರು ಪ್ರಾಣೇಶದಾಸರಿಂ |ಶ್ರೀಶ ಪ್ರಾಣೇಶ ವಿಠಲೆಂಬಂಕಿತಾ ||ಸೋಸಿನಿಂದಲಿ ಪಡೆದು ಶ್ರೀಶ ಮಹಿಮೆ ಉ- |ಲ್ಲಾಸದಿಂದಲಿ ಭಜಿಸಿ ಬೇಸರವನಳಿಯುತಾ 4 ಮರುತನೆ ಪರಮ ಗುರು, ಹರಿಯೆ ಪರದೇವತೆ |ಪುರಂದರರೆ ದಾಸರೆಂದರುಹಿ ಧರೆಗೆ ||ವರದೇಂದ್ರ ವಿಠಲನ ಚರಣವನು ಪೂಜಿಸಿ |ದರಣಿ ಸಾಧನವನ್ನು ತ್ವರಿತದಿಂದಲಿ ಮುಗಿಸಿ 5
--------------
ಶ್ರೀಶಪ್ರಾಣೇಶವಿಠಲರು