ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನವರತ್ನದ ಮಂಟಪದಿ ಮೆರೆವೊ ಸುಖಾಸನಕೆ ಈಗ ನವಮೋಹನ ರಘುರಾಮನೆ ನೀನು ಬಾ ಬೇಗ ಪ. ದಶರಥನುದರದಿ ಜನಿಸಿ ಅಸುರ ತಾಟಕಿಯನು ಸಂಹರಿಸಿ ಋಷಿಗಳ್ಯಾಗವ ಕಾಯ್ದದು ನೀನು ಋಷಿ ಪತ್ನಿಯರನು ಉದ್ಧರಿಸೀ ಪತಿವ್ರತೆಯೆನಿಸಿದ ಅತುಳ ಮಹಿಮ ಶ್ರೀರಾಮ ಬಾ ಬೇಗ ಅತುಳ ಮಹಿಮ ಶ್ರೀರಾಮ ಬಾ ಬೇಗ1 ಶಿವಧನುವೆತ್ತಿದ ಧೀರ ಸೀತಾದೇವಿಯ ಕರವನೆ ಪಿಡಿವಾ ತವಕದಿ ಮುರಿದಾಯೋಧ್ಯಯಾಳಿದ ಶ್ರೀ ಶ್ರೀನಿವಾಸನೆ ನೀನು ಬಾ ಬೇಗ ಸುಖಾಸನಕೆ 2
--------------
ಸರಸ್ವತಿ ಬಾಯಿ
ರಘುರಾಮಗೆ ಬೆಳೆಗಿರೆ ಬೇಗ ಆರತಿ ಪ. ಪಶುಪತಿ ಮಿತ್ರಗೆ ಋಷಿಗಳ್ಯಾಗವ ಕಾಯ್ದವಗೆ ಶಶಿಮುಖಿ ಅಹಲ್ಯೆ ಶಾಪವ ಕಳೆದ ಅತುಳ ಮಹಿಮ ಶ್ರೀಹರಿಗೆ 1 ಶಿವನ ಧನುವ ಮುರಿದವನಿಜೆಯಳ ತಂದು ಜವದಿ ಪರಶುರಾಮನಿಗೆ ತವಕದಿ ಗರ್ವವ ಮುರಿದವನೀಶಗೆ ಕಮಲಾಕ್ಷಿಯರೀಗ ಬೇಗಾ 2 ಅನುಜನವಡಗೂಡಿ ವನಿತೆ ಸಹಿತಲೀ ತನುಜನಗೂಡಿದನುಜನ ಮುರಿದ ಘನದ ಶ್ರೀ ಶ್ರೀನಿವಾಸನಿಗೆ 3
--------------
ಸರಸ್ವತಿ ಬಾಯಿ