ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಸೂರ್ಯ | ನಾರಾಯಣ ರಥ ಸೂರ್ಯ ಪ. ಸೂರ್ಯ ರಥವನು ಭಾರಿ ವಸನಾಭರಣ ತೊಡುತಲಿ ಮೂರುಲೋಕವ ಬೆಳಗು ಮಾಡುತ ಭಾರಿ ತಮವನು ಛೇದಿಸುತ್ತ ಅ.ಪ. ಸಪ್ತ ಹಯೆಗಳ್ ಕಟ್ಟುತ | ಚಕ್ರೇಕ ರಥಕೆ ಸಪ್ತ ಋಷಿಗಳ್ ಪೊಗಳುತ | ಅರುಣ ಸಾರಥ್ಯ ಸಪ್ತ ಜಿಹ್ವನ ತೆರದಿ ತೋರುತ ಸಪ್ತ ಶರಧಿಯ ದಾಟಿ ಸಾರುತ ಸಪ್ತಗಿರಿ ಮೇರು ಸುತ್ತುತಾ ರಥ ಶುಭ ದಿವಸದಲ್ಲಿ 1 ವಾಲಖಿಲ್ಯರು ಎದುರಲಿ | ಅರವತ್ತು ಸಾವಿರ ಓಲಗ ತೊಡುತಲಲ್ಲೀ | ಹಿಂದು ಮುಂದಿನಲಿ ಗಾಲಿದಬ್ಬುವ ರಕ್ಕಸೊಬ್ಬನು ವ್ಯಾಳನೊಬ್ಬನು ರಜ್ಜರೂಪಕೆ ಮೇಲೆ ಯಕ್ಷಕಿನ್ನರರು ಸುತ್ತಲು ಕರ್ಮ ಸಾಕ್ಷಿಯು 2 ಉತ್ತರಾಯಣ ಮಾಘದಿ | ಸ್ನಾನವಗೈದು ಉತ್ತಮರಘ್ರ್ಯ ಕರದಿ | ಪಿಡಿಯುತ್ತ ಭರದಿ ಉತ್ತಮ ಗಂಗಾದಿ ತೀರ್ಥದಿ ಉದಿಸಿ ಬರುವಗೆ ಕೊಡುವ ಕತದಿ ಚಿತ್ತ ನಿರ್ಮಲದಿಂದ ಕಾದಿರೆ ಹತ್ತಿ ಛಾಯೆಯೆ ಸಹಿತ ರಥದಿ 3 ಜಗಚಕ್ಷುವೆನಿಸಿದನೂ | ಧರ್ಮಜಗೆ ವಲಿದು ಮಿಗೆ ಅಕ್ಷಪ್ರದನಾದನೂ | ಸವಿತೃ ನಾಮಕನೂ ಬಗೆ ಬಗೆಯ ಜೀವರುಗಳಯುವ ತೆಗೆದು ಸೆಳೆಯುತ ದಿನದಿನದಲಿ ನಿಗಮಗೋಚರ ನಾಜ್ಞೆಧಾರಕ ಸುಗುಣರಿಗೆ ಸುಜ್ಞಾನವೀಯುತ 4 ಕಮಲ | ಗದೆಯ ಧರಿಸಿ ಕಿಂಕರಾದ್ಯರ ನುತಿಗಳ | ಕೇಳುತ್ತ ಬಹಳ ಶಂಖ ಚಕ್ರಾಂಕಿತನು ಶಿರಿಸಹ ಶಂಕಿಸದೆ ತನ್ನ ಹೃದಯದಲ್ಲಿರೆ ಬಿಂಕ ಗೋಪಾಲಕೃಷ್ಣವಿಠಲಗೆ ಕಿಂಕರನು ತಾನÉಂದು ಪೊಗಳುತ 5
--------------
ಅಂಬಾಬಾಯಿ
ನವರತ್ನದ ಮಂಟಪದಿ ಮೆರೆವೊ ಸುಖಾಸನಕೆ ಈಗ ನವಮೋಹನ ರಘುರಾಮನೆ ನೀನು ಬಾ ಬೇಗ ಪ. ದಶರಥನುದರದಿ ಜನಿಸಿ ಅಸುರ ತಾಟಕಿಯನು ಸಂಹರಿಸಿ ಋಷಿಗಳ್ಯಾಗವ ಕಾಯ್ದದು ನೀನು ಋಷಿ ಪತ್ನಿಯರನು ಉದ್ಧರಿಸೀ ಪತಿವ್ರತೆಯೆನಿಸಿದ ಅತುಳ ಮಹಿಮ ಶ್ರೀರಾಮ ಬಾ ಬೇಗ ಅತುಳ ಮಹಿಮ ಶ್ರೀರಾಮ ಬಾ ಬೇಗ1 ಶಿವಧನುವೆತ್ತಿದ ಧೀರ ಸೀತಾದೇವಿಯ ಕರವನೆ ಪಿಡಿವಾ ತವಕದಿ ಮುರಿದಾಯೋಧ್ಯಯಾಳಿದ ಶ್ರೀ ಶ್ರೀನಿವಾಸನೆ ನೀನು ಬಾ ಬೇಗ ಸುಖಾಸನಕೆ 2
--------------
ಸರಸ್ವತಿ ಬಾಯಿ
ರಘುರಾಮಗೆ ಬೆಳೆಗಿರೆ ಬೇಗ ಆರತಿ ಪ. ಪಶುಪತಿ ಮಿತ್ರಗೆ ಋಷಿಗಳ್ಯಾಗವ ಕಾಯ್ದವಗೆ ಶಶಿಮುಖಿ ಅಹಲ್ಯೆ ಶಾಪವ ಕಳೆದ ಅತುಳ ಮಹಿಮ ಶ್ರೀಹರಿಗೆ 1 ಶಿವನ ಧನುವ ಮುರಿದವನಿಜೆಯಳ ತಂದು ಜವದಿ ಪರಶುರಾಮನಿಗೆ ತವಕದಿ ಗರ್ವವ ಮುರಿದವನೀಶಗೆ ಕಮಲಾಕ್ಷಿಯರೀಗ ಬೇಗಾ 2 ಅನುಜನವಡಗೂಡಿ ವನಿತೆ ಸಹಿತಲೀ ತನುಜನಗೂಡಿದನುಜನ ಮುರಿದ ಘನದ ಶ್ರೀ ಶ್ರೀನಿವಾಸನಿಗೆ 3
--------------
ಸರಸ್ವತಿ ಬಾಯಿ