ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದ-ಬಂದ _ ಇಂದಿರೇಶ ನಂದನಂದನಾ ನಿಖಿಳ ಜನಕ ಕಂಧರಾಶ್ರಯಾ ಪ ಬಂದ ಬಂದ ಭಜಕ ಬಂಧು ಮಂದರಾದ್ರಿಧರ ಅರ- ವಿಂದನಯನ ಸುಂದರಾಂಗ ಸಿಂಧುಶಯನ ನಳಿನನಾಭ ಅ.ಪ. ನೀಲಮೇಘ ಶ್ಯಾಮಸುಂದರಾತನಿಗೆ ಮೇಲುಸಮರು ಇಲ್ಲವೆನಿಸಿದ ಲೀಲೆಯಿಂದ ಜಗವ ಸೃಜಿಸಿ ಪಾಲಿಸುತ್ತ ಮತ್ತೆ ಅಳಿಸಿ ಆಲದೆಲೆಯಮೇಲೆ ಸಿರಿ ಲೋಲನಾಗಿ ಮೆರೆವ ಕೃಷ್ಣ 1 ಐದು ರೂಪದಿಂದ ಕ್ರೀಡಿಪಾ ಪ್ರಕೃತಿ ಬೋಧ್ಯ ಸಿರಿಗುನಾಥ ನಾಯಕಾ ಆದಿಮಧ್ಯ ಅಂತ್ಯ ಶೂನ್ಯ ಮೋದಪೂರ್ಣ ಜ್ಞಾನಕಾಯ ಮೋದ ಮುನಿಯ ಹೃದಯಸದನ ಗೋಧರಾತಪತ್ರ ಶ್ರೀಪ 2 ಆದಾನಾದಿ ಕರ್ತ ಬ್ರಹ್ಮನೂ ದಿವಿಜ ಸಾಧುಸಂಘ ಸೇವೆ ಗೊಂಬನೂ ವೇದವೇದ್ಯ ವೇದ ವಿನುತ ವೇದ ಭಾಗಗೈದು ಪೊರೆದ ಛೇದ ಭೇದರಹಿತ ಗಾತ್ರ ಸಾಧು ಪ್ರಾಪ್ಯ ಬಾದರಾಯಣ 3 ದಾಸಜನಕೆ ಮುಕ್ತಿನೀಡುವ ಮಹಿ- ದಾಸಕಪಿಲ ಪೂರ್ಣ ಕಾಮನೂ ದೋಷ ದೂರ ನಾಶರಹಿತ ವಾಸುದೇವ ಕ್ಲೇಶವಿದೂರ ಈಶವಿಧಿಗಳನ್ನು ಕುಣಿಪ ಕೇಶವಾದ್ಯನಂತ ರೂಪ4 ಮೊತ್ತಜಗಕೆ ಸತ್ತೆನೀಡುವಾ ನಿಖಿಳ ಸತ್ಯ ಜಗದ ಚೇಷ್ಟೆನಡೆಸುವಾ ಮೊತ್ತಶಬ್ದ ಘೋಷವರ್ಣ ಮತ್ತೆ ಪ್ರಣವ ಮಂತ್ರಗಣದಿ ನಿಖಿಳ ಯಜ್ಞ ಭೋಕ್ತನಾಥ ಅಂಗಭೂತ 5 ಜಿಷ್ಣುಸೂತ ಕೃಷ್ಣೆಕಾಯ್ದವಾ ಸ್ವರತ ವಿಷ್ಣು ಪುರುಷಸೂಕ್ತ ಸುಮೇಯಾ ವಿಶ್ವಕರ್ತ ವಿಶ್ವಭೋಕ್ತ ವಿಶ್ವರೂಪ ವಿಶ್ವಭಿನ್ನ ವಿಶ್ವವ್ಯಾಪ್ತ ಶಶ್ವದೇಕ ತೈಜಸ ಪ್ರಾಜ್ಞತುರ್ಯ 6 ಸತ್ಯಧರ್ಮಗಳನು ಕಾಯುವಾ ದುಷ್ಟ ದೈತ್ಯತತಿಯ ದಮನಗೈಯ್ಯುವಾ ಮತ್ಸ್ಯಕೂರ್ಮ ಕೋಲ ಚರಿತ ಭೃತ್ಯಭಾಗ್ಯ ನಾರಸಿಂಹ ಸತ್ಯಶೀಲ ಬಲಿಯವರದ ಕ್ಷಿತಿಪದಮನ ಕ್ಷಾತ್ರವೈರಿ ಪರಶುಧಾರಿ7 ವಿಶ್ವ ಬಿಂಬನು ರಾ ಜೀವಪೀಠನನ್ನು ಪಡೆದನೂ ರಾವಣಾರಿ ಕೃಷ್ಣ ಬುದ್ಧ ಭಾವಿಕಲ್ಕಿ ನಿತ್ಯಮಹಿಮ ಭಾವಜಾರಿ ಪ್ರೀಯ ಸಖನು 8 ಹಯಗ್ರೀವ ದತ್ತ ಋಷಭನೂ ಅಪ್ರ- ಮೇಯ ಹಂಸ ಶಿಂಶುಮಾರನು ಜಯಮುನೀಂದ್ರ ವಾಯುಹೃಸ್ಥ ಜಯೆಯ ರಮಣ ಕೃಷ್ಣವಿಠಲ ದಯದಿ ಪೊರೆಯಲೆಮ್ಮನೀಗ ಜಯವು ಎನುತ ನಲಿದು ನಲಿದು 9
--------------
ಕೃಷ್ಣವಿಠಲದಾಸರು