ಗೋಪೀಮಾನ ರಂಜನ ಶ್ರೀಪತಿ ಕರುಣಾಳು
ವ್ಯಾಪಿಸಿಕೊಂಡಿಹ ಮಾಮಕ ತಾಪವ ವೋಡಿಸು ಸುಲಭದಿ ಪ.
ಸೌಂದರ್ಯಾಮೃತ ಸಾರಾನಂದಾತ್ಮಕ ದೇಹ
ವೃಂದಾರಕ ಗಣ ನಯನಾ
ನಂದನ ನಿಖಿಳಾತ್ಮಾತ್ರಯ ನಿತ್ಯಾವ್ಯಯ
ಸತ್ಯಾವರ ಭಕ್ತಾಸ್ಪದ ಸುಮುಖ 1
ಸುಭಗಾಂಬುದನಿಭ ಗೋವರ
ಋಭುಗಣನುತ ಚರಣಾ
ಇಭರಾಟ್ಕøತ ಕರುಣಾಖಿಳ ವಿಭವಾಶ್ರಯ ತರುಣಿಗಣ
ಶುಭ ಸಂಚಯ ಕರುಣಾ ನಿಜಭರಣಾದೃತ ಕರಣಾ 2
ಶೃಂಗಾರ ವಿಲಾಸಿನಿಜಾಪಾಂಗಾಹೃತ ಗೋಪಕತ
ಸ್ವಂಗೀಕೃತ ಪ್ರೇಮಭವಾಲಿಂಗಿತ ಶುಭಮೂರ್ತಿ
ಅಂಗಜಜನಕಾದ್ಭುತ ಸಾರಂಗ ಮಮತ ಶೇಷಗಿರಿ
ಶೃಂಗಾಧಿಷ್ಟಿತ ಕರುಣಾಪಾಂಗವ ದಯಮಾಡೆನುತಲಿ 3