ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಆತನೇ ದಾತನು ಯೆತ್ತಿಕೊಡುವವನು ಭೂತದಯೆಯುಳ್ಳಂಥ ಪುಣ್ಯಾತ್ಮನು ಪ ನಿಂದು ಕೀರ್ತಿಯೆ ಪಾಡೆ ದೇಹಿಯನ್ನುತ ಬೇಡೆ ಸಿಂಧು ಜಲದಲಿ ಮಿಂದು ಭಜಿಸಲಾಗ ಬಂಧನವ ಪರಿಹರಿಸಿ ಬಹು ಪ್ರೀತಿಯಿಂದೆನಗೆ ಬಂದಿರುವ ಕಷ್ಟಗಳ ನೀಗುವರು ಯಾರೋ 1 ನಿತ್ತು ಶ್ರೀ ಹರಿಭಜಿಸೆ ಕೂತು ಶ್ರೀ ಹರಿಸ್ಮರಿಸೆ ತಾತನೇ ಗತಿಯೆಂದು ಪಾದದಲಿ ಬೀಳೇ ಹೊತ್ತು ನೋಡದೆ ಮುದದಿ ಭಿನ್ನವೆಣಿಸದೆಯನಗೆ ಯೆತ್ತಿ ಮೋಕ್ಷವ ಬೇಗನೀವ ನಾರೋ 2 ನಾನು ಬಡವನು ಜಗದಿ ದೀನಹೀನನು ಹರಿಯೆ ಏನು ಗತಿಯೆಂದೆನುತ ಚರಣ ಮರೆ ಹೊಕ್ಕೇ ಪಾನ ಮಾಡುತಲೆನ್ನ ಅವಗುಣವ ನೀಗೆನಗೆ ತಾನೆ ಭಿಕ್ಷವು ಬೇಗನೀವ ನಾರೋ 3 ಭಜನೆ ಸ್ತೋತ್ರಗಳರಿಯೆ ಪೂಜೆ ವಿಧಿಯನು ತಿಳಿಯೇ ಅಜನ ಪಿತ ಶ್ರೀಹರಿಯ ಮೆಚ್ಚಿಸಲು ಅರಿಯೇ ಸುಜನರನು ಪೊರೆವಂತೆ ಸಲಹುವನು ಯಾರೋ 4 ನಾನು ಪಾಪಿಯು ಋಣಿಯು ಕ್ಲೇಶವನು ತೊರೆದೀಗ ಇನ್ನು ಮರೆಯದೆ ನಿನ್ನ ದಾಸನಾಗುವೆನು ಚನ್ನಕೇಶವ ಸ್ವಾಮಿ ರಕ್ಷಿಸೆಂದೊದರುತಿರೆ ಪ್ರಾಣವನು ಯತ್ತೆನ್ನ ಸಲಹುವನು ಯಾರೋ 5
--------------
ಕರ್ಕಿ ಕೇಶವದಾಸ
ಈ ಸಮಯದಲಿ ಸುಮ್ಮನಿರುವರೆ ರಾಮಾದಾಸಾನುದಾಸರೊಳು ತೋರದೆ ಪ್ರೇಮಾ ಪಮರುಗಿ ಬೆದರದಿರೆಂಬ ಮಾತೃ ಮೊದಲೆುಲ್ಲಕರೆದು ನಾ ಬೇಡಿದುದ ಕೊಡುವ ಪಿತೃ'ಲ್ಲನೆರವಾಗಿಯನುಸರಿಸಿ ನಡೆವ ಭ್ರಾತೃಗಳಿಲ್ಲಮೊರೆುಡಲು ನಿನಗೆ ನೀ ಮುಖದೋರೆಯಲ್ಲಾ 1ಕಡ ಹುಟ್ಟಿದರೆ ಬಡವ ಕೆಡುವನೆಂಬೀಗಾದೆತೊಡರಿಕೊಂಡೆನ್ನೊಳಗೆ ತೋರಿದುದು ತಂದೆತಡವ ಮಾಡದೆ ಮುಂದೆ ತನಿದಯಾರಸದಿಂದೆಕಡೆಹಾುಸಬೇಕೆಂದೆ ಕರುಣಾಬ್ಧಿುಂದೆ 2ಶರಣು ಹೊಕ್ಕೆನು ಜೀಯ ಸೀತಾಮನಃಪ್ರೀಯನರಳಿಪರೆ ಋಣಿಯ ಚಿಕನಾಗಪುರ ನಿಲಯಾಮರೆದೆನ್ನ ದುರ್ನಡೆಯ ಮರುಗಿ ನೀ ಸಲಹಯ್ಯವರದ ವೆಂಕಟರಾಯ ವಾಸುದೇವಾರ್ಯ3
--------------
ವೆಂಕಟದಾಸರು
ಋಣವ ಮಾಡ್ದಧಮಗುಸುರಲೆುಲ್ಲ ನೀತಿಯಮನು ಮುಖ್ಯಸ್ಮøತಿಕರ್ತರೂ ಪಕಣುಗೆಟ್ಟಿನೀ ದೋಷ ಕಡಲೊಳಗೆ ಮುಳುಗಿ ಮುಂದಣ ಗತಿಯದೇನೆನಗೆ ಕರುಣಿಸೈ ಗುರುವೆ ಅ.ಪಹೇಮಾದ್ರಿ ಮಾಧ'ೀಯಾದಿ ಪ್ರಾಯಶ್ಚಿತ್ತ ನೇಮ 'ಧಿ ಕಾಂಡಗೆಗಳೊಳೂಕಾಮದಿಂದಲಿ ಮಹಾಪಾತಕಗಳನು ಮಾಡಿದೀ ಮಹಾ ತಂಡಗಳೊಳೂಭೂ'ು ಗೋ ದ್ವಿಜರಾಜ ಸ್ತ್ರೀ ದ್ರೋ'ಗಳೊಳು ಪರಭಾ'ುನೀಗಾ'ುಗಳೊಳೂತಾಮಸಾಧಮರೊಳಧರ್ಮನೆನಿಸಿಹೆನೆಂದೇ ಮರಳಿ ಮರಳಿ ಪೇಳಿಹುದಲ್ಲವೆ ಗುರುವೆ 1ಹದಿನೆಂಟು ಬಗೆ ಮಹಾ ಪೌರಾಣ ಕಥೆಗಳೊಳಗಧಮನೀ ಋಣವಂತನೆವದರುತಿವೆಯುಪಪುರಾಣಂಗಳಷ್ಟಾದಶಗಳಧಮನೀ ಋಣವಂತನೆಒದಗಿದೀ ಸಂಖ್ಯೆಯುಪಸ್ಮøತಿಗಳೊಳಗೂ ಪೇಳ್ವುದಧಮನೀ ಋಣವಂತನೆಸದಯತನ ಪುಟ್ಟದಾುತೀ ಪತಿತ 'ಷಯದಲಿಹದನೆನಂಮುಂದೆ ಮುಳುಗಿದೆನೆಲ್ಲೊ ಗುರುವೆ 2ಮೂರು ಮತ್ತೈದಾ ಭೇದ ಋಣ 'ದ್ದರೆಯು ತೀರುವರೆ ಮಾರ್ಗಗಳಿವೆತೀರದಿದ್ದರು ಜನುಮಗೊಡುವವಲ್ಲದೆ ವೃದ್ಧಿಸಿರಿ ಬೆಳೆಯದೆ ನಿಂತಿವೆಆರು ಬಗೆುಂ ಬಡ್ಡಿ ನುಡಿಯದಿದ್ದರು ದಿನವು'ುೀರಲಿದಕೊದಗುತಲಿವೆದಾರಿಯ ನನಗೀಪರಿಯ ಧನ ಋಣವ ದೈವಹೇರಿ ತಳವಳಿದೆನೈರಕ್ಷಿಸೈ ಗುರುವೆ 3ಕಾಶಿಗೈದುವರಾಗದಡ'ಯೊಳಿರುವರಾಗದೀಶ ಭಜನೆಯ ಗಣಿಸದೂುೀಷಣೆಗಳನು ಬಿಟ್ಟು ಸನ್ಯಾಸವನು ಮಾಡಲೀಸದೆ ತನವನರಸದೂದೇಶದೇಶವ ತಿರುಗೆ ತೀರ್ಥಗಳೊಳ್ಮಿಂದರೂಲೇಶ ಮಾತ್ರವು ಸವೆಯದೂಈ ಶರೀರವು ಬೀಳೆ ಕ್ರಮವಾಗಿ ತೊತ್ತು ಸತಿದಾಸಸುತ ಕತ್ತೆಭವಗೊಡುವದೈ ಗುರುವೆ 4ಋಣವು ಮಾಡಿದ ಪತಿತನುಂಬ ಪಂಕ್ತಿಯೊಳು ಜನರುಣಲಾಗದುಂಡರವನೂತನಯ ಪೌತ್ರರು ಸ'ತ ಪತಿತನಪ್ಪನು ನಿಮಂತ್ರಣಗೈಸೆ ಧನ ಋಣಿಯನೂಎಣಿಸಲಾ ಕಲ್ಪನರಕವು ಪಿತೃಗಳಿಗೆ ಕರ್ತನನುಭ'ಪ ನರಕಗಳನೂಎನುತ ಭೀಷ್ಮಾಚಾರ್ಯರುಸುರಿದರು ಧರ್ಮನಂದನಗೆ ಭಾರತ ಶಾಂತಿಪರ್ವದೊಳು ಗುರುವೆ 5ತಲೆಯೋಡ ಪಿಡಿದು ಚಂಡಾಲಗೇರಿಯಲಾದರಳುತ ಕೊಟ್ಟ ಪರಧನವಸಲಿಸದೆ ಕೆಟ್ಟು ಬಂದೆನು ಭಿಕ್ಷಗೊಡಿಯೆಂದುಹಲವು ನಿಂದ್ಯದ್ರವ್ಯವಾಅಳುಕದೆ ತಂದು ಜೀವನಗೈಯ್ದುದರಿಂದುಸಲೆಗೈದು ತಂದ ಋಣವಾಕಳಿವ ನವನರಕಗಳೆಂದು ಹರಿಶ್ಚಂದ್ರ 'ಭುತಿಳು'ದರು ದುರ್ಮನ ಬಿಡದಲ್ಲೊ ಗುರುವೆ 6ಸುತನ ಮಾರಿದ ದೋಷ ಸತಿಯ ಮಾರಿದ ದೋಷಪಿತೃ ಮಾತೃಹತ್ಯ ದೋಷಾಪತಿತನಾಗುವ ದೋಷ ಪತ್ರವನು ಬರದು ತನುಪತನವಾಗುವ 'ಶೇಷಯತನದಿಂದ ಮಾಡ್ದ ಪುಣ್ಯವು ಪೋಪದೋಷ ಪರಸುತ ಭೃತ್ಯನಪ್ಪ ದೋಷಜೊತೆಗೂಡಿ ಗಣಿಸದೆ ಸಾಲವನು ಮಾಡಿದೀಪತಿತನನು ನರಕಕಿಳುಹುವದೆಲ್ಲೊ ಗುರುವೆ 7ನಿತ್ಯಕರ್ಮವ ಮಾಡುವಧಿಕಾರ ಮೊದಲಿಲ್ಲಸತ್ತ ಸೂತಕಕಧಿಕವೂಹೆತ್ತ ತಾು ತಂದೆಗಳ ಮೃತ ದಿನದಿ ಪಿಂಡಗಳನಿತ್ತರವರನುಸಿರವೂಸತ್ತರೂ ಬಿಡದೆ ಬೆಂಬತ್ತಿ ಪೈಶಾಚದಂತೊತ್ತುವದೇಳೇಳು ಭವವೂಇತ್ತಲ್ಲದೆ ಬಡ್ಡಿಸಹ ಮೌಲ್ಯವನು ಪೋಗದೆತ್ತ ಹೋಗಲಿ ಯೇನಮಾಡಲೈ ಗುರುವೇ 8ವರುಷ ಸಾ'ರವಾದರೆಯು ಋಣದ ಮ'ಮೆಯನುಬರೆಯುವದಸಾಧ್ಯ ಗುರುವೆಪರಮ ಋಣಿಗಳು ಸ್ಮøತಿ ಪುರಾಣೇತಿಹಾಸಗಳೊಳರುಪುತಿಹರಿಂತು ಗುರುವೆಹರತು ಋಣಗತ್ತಲೆಯು ನಿನ್ನ ಪದಗಾಬಂತೆಕರುಣಿಸೈ ಬೇಗ ಗುರುವೆಮರೆಯೊಕ್ಕೆ ನಾನು ತಿಮ್ಮದಾಸ ಚಿಕ್ಕನಾಗಪುರವರನಿಲಯ ವಾಸುದೇವಾರ್ಯ ಸದ್ಗುರುವೆ 9
--------------
ತಿಮ್ಮಪ್ಪದಾಸರು
ಎದ್ದರಾಳಲ್ಲೆಂದು ಬಿದ್ದಿರುವೆನೊ ನಾನು ಮಧ್ವರಮಣನೆ ದಯದಿ ಉದ್ಧರಿಸೆಲೊ ಪ ಏನು ಮಾಡಿದರೇನು ಮಾಡದಿದ್ದರೆ ಏನು ಕಾಣಲಾರೆನೊ ನೀನೆ ತಿಳಿಸಿ ಪೊರೆಯೊ ಕಾನನದಿ ತಿರುತಿರುಗಿ ತೊಳಲಿ ಬಳಲುತಲಿ ಬಲು ದೀನನಾದೆನೊ ಶಕುತಿಯುಕುತಿ ಹೋಗಿ1 ನುಡಿದೆ ನಾ ನೂರೆಂಟು ಅಡಿಯಿಡಲು ಬಲು ಕುಂಟು ಕಡೆಗಾಲದರಿವಾಗಿ ಬಳಲುತಿಹೆನೊ ಸಡಲಿತೆನ್ನಯ ದೇಹ ಸಿಡಿಯಿತೆನ್ನಯ ಮೋಹ ನಡೆಯಾಟವೆನಗಿನ್ನು ಸಾಧ್ಯವಿಲ್ಲವು ದೇವ 2 ಕೊಟ್ಟರೆ ಹೊಗಳುವರು ಕೊಡದಿರಲು ಬೊಗಳುವರು ಕೊಟ್ಟೆನ್ನ ಕರವೆರಡು ಬೆಂಡಾದವೊ ಸುಟ್ಟಿತೆನ್ನಯ ಕೋಪ ನಿಷ್ಠುರದಿ ಬೇಸತ್ತು ಇಷ್ಟು ಜೀವನ ಸಾಕೊ ಕೃಷ್ಣ ಮೂರುತಿಯೇ3 ಗುಣವಿಲ್ಲ ಧನವಿಲ್ಲ ತನುವಿಲ್ಲ ಮನವಿಲ್ಲ ಹೊಣೆ ಹೊರೆವುದೆಂತೆಂದು ಕೈ ಬಿಡದಿರೊ ತೃಣ ಗಿರಿಯನೊದೆಯುವುದು ಒನಕೆ ತಾ ಚಿಗುರುವುದು ವನಜನಾಭನೆ ನಿನ್ನ ಮನಕೆ ಬರಲು 4 ನಾನೇನು ಬಲ್ಲೆ ನಿನಗೇನು ರುಚಿಯೆಂಬುದನು ನಾನರಿತರೂ ನಿನಗೆ ಕೊಡಬಲ್ಲನೆ ನಾನೇಕೆ ಜನಿಸಿದೆನೋ ನೀ ಬಲ್ಲೆ ನಾನರಿಯೆ ಏನೆಂದು ಕೋರದೆಲೆ ಪೊರೆಯಬೇಕೊ 5 ಸಾಯುವರ ನೋಡಿ ಮನ ನೋಯುವುದು ಮೂರುಕ್ಷಣ ಮಾಯಾಪಾಶವು ಮುಸುರೆ ಮರೆವುದೆಲ್ಲ ಪ್ರಾಯದವನಂತೆ ಬಲು ಹೇಯ ಕೃತ್ಯಗಳಾಸೆ ನಾಯಿಬಾಲದ ಡೊಂಕು ತಿದ್ದಿ ಪೊರೆಯೊ 6 ನಂಬಿದವರೆಲ್ಲ ಬಲು ಸಂಭ್ರಮದಲಿರುವರೊ ಅಂಬಿಗನ ತೆರನಾದೆ ನದಿ ದಾಟಿಸಿ ತುಂಬಿರುವ ಮನದಾಸೆ ಹಂಬಲಿಕೆ ನೀಡಿ ತಿರಿ ದುಂಬುವನ ಕನಸಿನಂತಾದವೆನಗೆÀ7 ಇಂದು ನಾನಿಟ್ಟಿಲ್ಲ ಮುಂದೆ ಎನಗೇನು ಬೇಕೆಂದರಿಯೆನೊ ಹಿಂದಾದುದಂತಿರಲಿ ಇಂದಿರುವದಿರಲಿ ಮನ ಮಂದಿರದ ದಾನವರ್ಪಿಸುವೆ ನಿನಗೆ 8 ಮನೆಗೆ ತಾ ಯಜಮಾನ ಕೆಣಕೆ ಬದುಕುವರುಂಟೆ ಕುಣಿಯುತಿದ್ದರು ಜನರು ನುಡಿದ ತೆರದಿ ತನುಸಡಲಿ ಬೀಳಲದ ಕೊನೆಗಾಲವೆಂದರಿತು ಮನೆ ಹೊರಗೆ ಕಸದಂತೆ ಬಿಸುಡುವುದ ನೋಡಿ9 ತುಂಬು ಸಂಸಾರದಲಿ ಸಂಭ್ರಮವನೇಕಗಳು ಸಂಭ್ರಮದಿ ನಿನ್ನ ಹಂಬಲವೇತಕೆ ಕಂಬ ಸಡಲಿದ ಮನೆಯ ತೆರದಿ ದೇಹವು ಸಡಲೆ ಡೊಂಬನಾಟವನಾಡಿ ಚಂಬು ಪಿಡಿದಂತೆ 10 ಕೆಲಸವಿರುವಾಗ ಬಲು ಹೊಲಸು ನಿದ್ರೆಯ ಮಾಡಿ ಹೊಲಸು ವಿಷಯದಿ ಬಹಳ ಎಚ್ಚೆತ್ತೆನೊ ಕಲಿಯು ಕರೆದೌತಣವನಿತ್ತೆ ನಾ ಬಹುವಿಧದಿ ಬಲಿಕೊಡುವ ಕುರಿಯಂತೆ ಬಳಲುತಿರುವೆನೊ ದೇವ 11 ಮರೆವು ಜನತೆಗೆ ದೊಡ್ಡವರವೆಂದು ನೀ ಕೊಟ್ಟೆ ಗಿರಿಯಂಥ ಕಷ್ಟಗಳ ಮರೆಯಲಾಯ್ತೊ ಅರಿವು ಕೊಡದಂತೆ ನಾ ಮರೆತೆನೆಂಬಪರಾಧ ಸರಿತೂಗುವುದೆ ಇದಕೆ ಗುರಿ ಯಾರೊ ದೇವ 12 ಸಾಧು ಜನರಿರುವರೊ ಮೇಧಾವಿಗಳು ಇಹರೊ ಮಾದರಿಯ ಜೀವನವ ತೋರ್ಪರಿಹರೊ ಸಾಧುವಲ್ಲವೊ ನಾನು ಮೇಧಾವಿಯಲ್ಲ ಹೊಸ ಮಾದರಿಯ ತಿರುಕನೆಂದರಿತು ಪೊರೆಯೊ13 ಅರೆಕ್ಷಣವು ನಿನ್ನನು ಸ್ಮರಿಸಲಾರದ ಜನರು ಅರಮನೆಗಳಲ್ಲಿ ವಾಸಿಸುವುದೇಕೊ ಕರಚರಣವಿಲ್ಲದ ಕಪೋತಿಕ ನಿನ್ನಯ ನಾಮ ಕಿರಿಚುತಿರುವುದ ನೋಡಿ ಹರುಷವದೇಕೊ 14 ಗಿಣಿಯಂತೆ ರಾಮ ರಾಮ ಎಂದರೇನು ಫಲ ಫಣಿಯಂತೆ ಸಾಷ್ಟಾಂಗ ನಮಿಸಲೇನು ಋಣಿಯಂತೆ ಧನಿಕನಲ್ಲಿ ಹಲ್ಲುಗಳ ಕಿರಿದರೇನು ಮನವಿಟ್ಟು ಕೆಲಸ ಮಾಡುವುದರಿಯದೆ 15 ಮನಕೆ ಬಂದುದನೆಲ್ಲ ಮಾಡÀುವವರಿರುವರೊ ಮನಕೆ ಶಾಂತಿಯ ಮಾಡುವವರ ಕಾಣೆ ಕನಕವೆರಿಚಿದರಿಲ್ಲ ವನವ ಸೇರಿದರಿಲ್ಲ ಮನಮಂದಿರದಲಿ ನೀ ಇಣಿಕಿನೋಡುವ ತನಕ 16 ಲಂಚಗಳ ಕೊಟ್ಟು ಫಲಗಳ ಬೇಡುವವನಲ್ಲ ಸಂಚುಮಾಡಲು ಶಕುತಿ ಯುಕುತಿಯಿಲ್ಲ ವಂಚಕರ ಬಹುಮತ ಪ್ರಪಂಚದಲಿ ನೀನೊಬ್ಬ ಹೊಂಚು ಕಾಯುತಲಿರುವ ಎಂಬುದರಿತು 17 ರೈಲು ಬಂಡಿಗಳಲಿ ಐಲುಪೈಲುಗಳನ್ನು ಮೌಲ್ಯವಿಲ್ಲದೆ ಸಾಗಿಸುವುದನರಿತು ಕಾಲು ಕಣ್ಣೆಲ್ಲದ ಕಪೋತಿಯೊ ನಾನೊಂದು ಮೂಲೆಯಲಿ ಕುಳಿತು ಬರಲವಕಾಶವೀಯೊ 18 ನಿನ್ನ ಗುಣಗಳನರಿಯೆ ನಿನ್ನ ವರ್ಣಿಸಲರಿಯೆ ನಿನ್ನ ಸೇರಲು ಎನಗುಪಾಯವಿಲ್ಲ ಕನ್ನ ಕತ್ತರಿಯ ಕಾಣಿಕೆಯೊಂದೆ ಸಾಧ್ಯವೊ ಇನ್ನು ತಲೆ ಎತ್ತಿನೊ ಪ್ರಸನ್ನನಾಗುವ ತನಕ 19
--------------
ವಿದ್ಯಾಪ್ರಸನ್ನತೀರ್ಥರು
ದೂರಕ್ಕೆ ದೂರನೆಂದು ಹೆರೆ ಸಾರಲಿ ಬೇಡಸಾರಿಗೆ ಸಾರಿ ನಮ್ಮ ಕೃಷ್ಣನ್ನ ಸಾರಿರೈಯ ಪ ಅನಂತ ಜನುಮದೊಳೊಂದೆ ಜನುಮಅನಂತ ಕ್ಷಣದೊಳಗೊಂದೆ ಕ್ಷಣಅನಂತ ನಾಮದೊಳೊಂದೇ ನಾಮವಮುನಮುಟ್ಟಿ ನೆನೆದರೆ ಬೆನ್ಹತ್ತಿ ಬಿಡನೈಯ 1 ಅನಂತರೂಪದೊಳೊಂದೆ ರೂಪಅನಂತ ಗುಣದೊಳಗೊಂದೆ ಗುಣಅನಂತ ಜೀವರೊಳಗಾವನಾದರುಂ ಕನಸಿಲಿ ನೆನೆದರೆ ಋಣಿಯಾಗಿಪ್ಪನೈಯ 2 ಒಂದೆ ಹೂವು ಒಂದೆ ಫಲವೊಂದೆಬಿಂದು ಜಲವೊಂದೆ ತುಳಸಿಒಂದೇ ವಂದನೆಯೊಂದೆ ಪ್ರದಕ್ಷಿಣೆಒಂದನರ್ಪಸಿದೊಡಂ ಕುಂದದಾನಂದವೀವನೈ 3 ಹರಿ ಚಿನ್ಹಾಂಕನ ಹರಿದಿನದುಪವಾಸನೆರೆಯೂಧ್ರ್ವ ಪುಂಡ್ರ ತುಳಸಿಮಾಲೆಹರಿಯುತ್ಸವ ಸೇವೆ ಹರಿದಾಸರ ಸಂಗದುರಿತಾಬ್ಧಿಗೆ ಕುಂಭಸಂಭವನಲ್ಲವೆ 4 ಹರಿಪಾದ ತೀರ್ಥವು ಹರಿಯ ನಿರ್ಮಾಲ್ಯವುಹರಿ ಆರತಿ ಧೂಪ ಶೇಷಂಗಳುಹರಿಯ ಪ್ರಸಾದ ಶಂಖೋದಕ ಪ್ರತ್ಯೇಕದುರಿತ ರಾಸಿಗಳನ್ನು ಸೋಕಲು ಸುಡದೆ 5 ಒಮ್ಮೆ ಪಾಡಿದಡಂ ಒಮ್ಮೆ ಪೊಗಳಿದೊಡಂಒಮ್ಮೆ ಬೇಡಿದಡಂ ಒಮ್ಮೆ ನೋಡಿದಡಂಒಮ್ಮೆ ಸಾರಿದಡಂ ಮತ್ತೊಮ್ಮೆ ಕರೆದಡಂನಮ್ಮಾತನಿವನೆಂದು ಕೈಯ ನೀಡುವನೈಯ 6 ತನ್ನಲ್ಲಿಪ್ಪನಾಗಿ ದೂರನಲ್ಲ ನರಹೊನ್ನು ಬೇಡ ಲಕುವಿರಮಣಗೆ ಅನ್ಯವ್ಯಾತಕ್ಕೆ ಈ ಪರಿಪೂರ್ಣಾನಂದಗೆನಿನ್ನವನೆಂದರೆ ತನ್ನನೀವನು ಕೃಷ್ಣ7
--------------
ವ್ಯಾಸರಾಯರು
ಲೋಕನೀತಿ ಮತ್ಸರಿಸುವವರಲ್ಲಿ ಮಾನ್ಯವಿರಲೀ ಪ ಬಚ್ಚಲಿಲ್ಲದ ಮನೆಯು ಸ್ವಚ್ಛತಾನಾಗಿಹುದೆ ಅ.ಪ ಅರಿಷಡ್ವರ್ಗಗಳು ತುಂಬಿಕೊಂಡಿಹ ದೇಹ ಪರಿಶುದ್ಧವಹುದೇನೊ ಆವಾಗಲೂ ಪರಿಪರಿಯಿಂದಲಿ ಪರಿವಾರ ಜನಗಳು ಪರಿಹಾಸ್ಯಮಾಡಿ ಅಘವ ಕದ್ದೊಯ್ವರಯ್ಯ 1 ಗುಣತ್ರಯಗಳಿಂದಲಿ ನಿಬಿಡವಾದೀದೇಹ ಗುಣಕಾರ್ಯ ಮಾಡದೇ ಬಿಡದೆಂದಿಗೂ ಅಣಿಯಾಗಿ ದುರ್ಗುಣಗಳೊಕ್ಕಣಿಸಿ ಪೇಳುವಡೆ ಗುಣವ ತಿದ್ದಲು ತಾವು ಋಣಿಯಾಗುವರಯ್ಯ2 ಅಭಿಮಾನವೆಂಬುದು ನಭೋಮಂಡಲವರೆಗಿಹುದು ಶುಭವೆಂತೊ ಡಾಂಭಿಕದ ಹೇ ಮಾನವಾ ತುಂಬಿತುಳುಕುವ ದುರಭಿಮಾನವನೆ ತೊಲಗಿಸಿ ಇಂಬು ತೋರುವರಯ್ಯ ಮನಸ್ಥೈರ್ಯಕೇ3 ಕಕ್ಕುಲತೆ ಪಡದೆ ನಕ್ಕುಸಂತೈಸಿಲಾಲಿಸುವ ತೆರದಿ ಅಕ್ಕರದಿ ತನ್ನ ಅಪರಾಧಗಳನೆಲ್ಲ ಲೆಕ್ಕಿಸದೆ ಪೇಳ್ವರದು ಉಪಕಾರವಯ್ಯ 4 ಮಚ್ಚರದಿ ನಿಂದಿಸೆ ಅಚ್ಚುತನ ಭಕುತರಿಗೆ ನಿಚ್ಚದಲಿ ಸ್ವಚ್ಛಭಕುತಿ ಇಹುದು ಮಚ್ಚರಕೆ ಸ್ವೇಚ್ಛೆಯಿಂದೆದುರು ಉಚ್ಚರಿಸದಿರೆ ಮೆಚ್ಚಿ ಕಾಯುವನಯ್ಯ ಶ್ರೀ ವೇಂಕಟೇಶ 5
--------------
ಉರಗಾದ್ರಿವಾಸವಿಠಲದಾಸರು