ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಪರೀಕ್ಷಿಸಿ ನೋಡುವೆಯೋ ಇನ್ನು ಎಷ್ಟು ಶೋಧಿಸೆ ನಿನಗಿಷ್ಟವೋ ರಂಗಾ ಪ ಹಣವಿರುವನಕ ಕುಣಿಕುಣಿದು ಮೆರೆದೆನೊ ಹಣವನಪಾತ್ರಕೆ ಮಣಿದು ಕಳೆದೆನೋ ಋಣವಮಾಡಿ ಯೆನ್ನ ಬಣಗುಹೊಟ್ಟೆಯ ಹೊರೆದೆ ಉಣಲುಡಲಿಲ್ಲದೆ ನೋಡದವೋಲಲೆದೇ 1 ಹೆಣ್ಣು ಹೊನ್ನು ಮಣ್ಣು ಕಣ್ಣಿಗಿಂಪಾಗಲು ಬಣ್ಣಿಸಿ ಭಾಗ್ಯವನುಣ್ಣಲು ಬಯಸಲು ಬೆಣ್ಣೆಯಂತಿದ್ದುದು ಸುಣ್ಣವಾಯಿತೊ ದೇವ ಕಣ್ಣು ಮಂಜಾಗಿ ಮೈಗಿಣ್ಣು ಮುರಿಯಿತಿನ್ನು 2 ಬಹು ಜನುಮದಿ ಸಂಗ್ರಹಿಸಿದ ಪಾತಕ ಬೃಹದಾಕಾರವಾಗಿದ್ದು ರಂಗಯ್ಯ ಅಹಿಶಯನನೆ ನಿನ್ನ ಮಹಿಮೆಯಿಂದೆಲ್ಲವು ದಹಿಸುವುದೆಂದು ನಂಬಿದೆ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್