ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಪ್ಪಿಸಿದೆ ಒರೆದು ದೂರ ಮುಂದೆನ್ನ ತಪ್ಪನೆಣಿಸದಿರು ಧೀರ ಅಪ್ಪಳಿಸು ಕಡು ಮೂರ್ಖರ ನಿನಗೆಂದು ತಪ್ಪುವುದೆ ಭಕ್ತಭಾರ ಪ. ದುರ್ಗಾಧಿಪತಿ ಲಾಲಿಸು ಮನಸಿಜನ ಮಾರ್ಗಣಕೆ ಸಿಲುಕಿ ಮನಸು ನಿರ್ಗಮಿಸದೊಳಸರಿದು ಮುಳುಗಿ ಸ- ನ್ಮಾರ್ಗಗಾಣದೆ ಕುಂದಿತು 1 ಪಂಚಾಂಗ ಪಲುಗುತಿರಲು ಮನೆಯ ಮ್ಯಾ- ಲ್ಹಂಚುಗಳಸ್ಥಿರವಾಗಲು ಚಂಚಲದಿ ಮನ ಕೆದರಲೂ ತದಧೀನ ಪಂಚಕರಣವು ಕೆಡುವವು 2 ಹೀಗಾದ ಬಳಿಕ ನಿನ್ನ ಸೇವೆ ಚೆ- ನ್ನಾಗುವದ ಕಾಣೆ ಮುನ್ನ ಶ್ರೀ ಗುರುವೆ ತ್ವರೆಯೊಳೆನನ ಮನವ ಪದ ರಾಗಿಯಾಗಿಸು ರನ್ನ 3 ಮೂರು ಋಣಬಾಧೆಯನು ಸಹಿಸುವದ- ಕಾರಿಂದ ಶಕ್ಯವಿನ್ನು ತೋರು ತ್ವಕ್ಕರುಣವನ್ನು ದಾಸನ್ನ ದೂರ ಬಿಡಲ್ಯಾತಕಿನ್ನು 4 ಸಂದಣಿಸಿಕೊಂಡು ಬರುವ ಸರ್ವ ಪ್ರತಿ ಬಂಧಕಗಳೆಲ್ಲ ತರಿವ ಕರವ ಶಿರದಿ ಭುಜ- ಗೇಂದ್ರ ಗಿರಿನಾಥ ದೇವ 5
--------------
ತುಪಾಕಿ ವೆಂಕಟರಮಣಾಚಾರ್ಯ
ದಾಸನಾಗಬೇಕು ಮನದಲಿ ಆಸೆಯಿಂಗಬೇಕು ಪ ಮೋಸಮೆಂಬುದಂಕುರಿಸದ ಅದರ ವಾಸನೆಯಂಟದ ಮಾನಸದಲಿ ಹರಿಅ.ಪ ಅತಿಮಾತಾಡುವ ಸತಿಯಿರಬೇಕು ಖತಿಯಿಂತೆರಳುವ ನೆಂಟರು ಬೇಕು ಹಿತವನು ಬಯಸದ ಸುತರೂ ಬೇಕು ಸತತಮಿವೆಲ್ಲರ ಸಹಿಸಿ ಭಜನೆಗೈವ 1 ತಣಿವಿಲ್ಲದೆ ತಿಂಬ ಅಣುಗರು ಬೇಕು ಹಣವ ಕೊಡೆಂಬುವ ಅಳಿಯರು ಬೇಕು ಋಣಬಾಧೆಗಳೊಳು ಕೊರಗಲು ಬೇಕು [ಅಣು ಅಣು ಕಾಡುವ ಸಂಸಾರಕಂಟದೆ] 2 ಮಾನಸವ ಬಿಗಿಹಿಡಿದಿರಬೇಕು ಧ್ಯಾನದೊಳಾತ್ಮಶಾಂತಿಯು ಬರಬೇಕು ಶ್ರೀನಿವಾಸನೇ ಶರಣೆನಬೇಕು ಜ್ಞಾನದಿ ಮಾಂಗಿರಿರಂಗನ ಪಾದದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪೋಗದಭಿಮಾನವೇಗೈವೆನಕಟಾಆಗದಾನಂದಪದ ಇದರಿಂದಲಕಟಾ ಪತನುವೆನ್ನದೆಂದು ಪೋಸಿ ಪೊರೆದಫಲವೇನುಧನವೆನ್ನದೆಂದು ಸಾಧಿಸಿದುದೇನುಮನವೆನ್ನದೆಂದು ಮತಿಯನು ಪಡೆದ ಬಗೆಯೇನುಅನುಕೂಲವಾಗಿ ಬಾಳಿಸಿದುದೆ ತಾನು 1ವನಿತೆಯೆನ್ನವಳೆಂದು ಒಡಲಾದ ಬಗೆಯೇನುತನುಜರೆನ್ನವರೆಂದು ತಡಿಗಂಡುದೇನುಮನುಜರೆನ್ನವರೆಂದು ಮೃತ್ಯುತೊಲಗುವದೇನುಇನಿತು 'ಧದಲಿ ಸುಖವ ಕಾಣದೆುನ್ನು 2ಇದರಿಂದ ಬಂತು ಋಣಬಾಧೆ ಮಾಸಿತು ಬೋಧೆಒದಗಿದಾ 'ರತಿಯನು ನೀಗಿ ನಿಂದೆಮದ ಹೆಚ್ಚಿ ಮೈಮರೆದೆ ಮೋಹಕ್ಕೆ ಒಳಗಾದೆಎದೆಯಲಿ 'ಷಯಸುಖಕಾಗಿ ಮತಿದೊರೆದೆ 3ಆವ ಜನ್ಮಾಂತರದ ಪೈಶಾಚವೋ ಕಾಣೆಆವ ಮಾಂತ್ರಿಕನಿದನು ಬಿಡಿಸುವನೊ ಕಾಣೆಆವ ವ್ರತನಿಯಮಗಳಿಗಂಜುವುದೊ ನಾ ಕಾಣೆಆವ ಜಪಗೈದಿದನು ಕಳೆಯಲೊ ಕಾಣೆ 4ಕರುಣಿ ಚಿಕನಾಗಪುರವರನಿಲಯ ಎನ್ನೊಡೆಯಗುರುವಾಸುದೇವಾರ್ಯ ಗೂಢಚರ್ಯಮರೆಯೊಕ್ಕೆ ನಿನ್ನಡಿಯ ಮಾನಪೈಶಾಚಭಯಹರಿವಂತೆ ಮಾಡು ನ'ುಸಿದೆನು ದಮ್ಮಯ್ಯ 5
--------------
ವೆಂಕಟದಾಸರು