ವಾಯುದೇವರ ಪ್ರಾರ್ಥನೆ
ಪ್ರಾಣಪತೇ ಪರಿಪಾಲಯ ಮಾಂಪ್ರಾಣಪತೇ ಪರಿಪಾಲಯ ಮಾಂ
ಕಮಲಾಲಯ ಕರುಣೈಕಾಲಯ ಭೂಮನ್ಯೆ ಪ.
ಋಜುಗಣನಾಯಕ ಭುಜಗಭೂಷಣ
ದ್ವಿಜರಾಜಾಹಿಪರಾಜಾ 1
ಭಾರತೀಶ ಕರುಣಾರಸ ಭೂಷಣ
ವಾರಿಜಾಸನ ಸಮಾಂಶಾ 2
ಕಪಿವರ ನೃಪವರ ಯತಿವರ ರೂಪ
ದುರಿತ ಸುರೂಪ 3
ರಾಮಕೃಷ್ಣ ವ್ಯಾಸಾಮಲ ಮಂಗಲ
ನಾಮಕ ಶ್ರೀಪತಿ ದೂತ 4
ವೆಂಕಟೇಶ ಚರಣಾಂಬುಜ ಮಧುಪ ವಿ-
ಶಂಕ ಶಂಕರಾತಂಕ ನಿವಾರಣ 5