ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾ ಕೆಟ್ಟ ಕೇಡ ಹೇಳುವೆನು ಎಲ್ಲ ಲೋಕದಂತೆನ್ನಬದುಕು ಆಗಲಿಲ್ಲ ಪ ಹೆಂಡರಿಚ್ಛೆಯಿಲ್ಲ ಹೀನವೆಂಬುದಿಲ್ಲಪಂಡಿತತ್ವದ ಪರಮಾರ್ಥಕಿಲ್ಲಉಂಡೆ ಉಟ್ಟೆನೆಂಬ ಊಹೆ ಮೊದಲಿಗಿಲ್ಲಕಂಡ ಕಂಡಂತೆ ಚರಿಸುವಂತಾಯಿತೆ 1 ಅರಿವು ಮರೆವು ಇಲ್ಲ ಆಸೆಗಳೇನಿಲ್ಲಇರುಳು ಹಗಲು ಎಂಬುದೆರಡಿಲ್ಲವೋಶರೀರ ಸ್ಮರಣೆಯಿಲ್ಲ ಶ್ರೇಷ್ಠ ಭಾವಗಳಿಲ್ಲಮರುಳು ಮರುಳು ಆಗಿ ತಿರುಗುವಂತಾಯಿತು 2 ಚಿದಾನಂದ ಗುರುವಿನ ಚಿತ್ತದಿ ಪಿಡಿದರೆಒದವಿದ ಬ್ರಹ್ಮಾನಂದವ ಸವಿದುವಿಧವಿಧವಾದ ಬೆಳಕಿನೊಳಾನಡಗಿರೆಇದರಿಂದಲಿ ಇಂತಾದುದಿದೆಲ್ಲವು3
--------------
ಚಿದಾನಂದ ಅವಧೂತರು
ಬ್ರಹ್ಮವೆತ್ತಲು ಪರಬ್ರಹ್ಮವೆತ್ತಲುಬ್ರಹ್ಮ ತಾವೆಯೆಂದು ವಾಚಾಬ್ರಹ್ಮವನೆ ಬಗಳುತಿಹರಿಗೆ ಪ ಆಸೆಯೆಂಬದು ಅಳಿಯಲಿಲ್ಲ ಆಕಾಂಕ್ಷೆತಾ ಕಳೆಯಲಿಲ್ಲಪಾಶವೆಂಬುದು ಬಿಗಿದು ಉರುಲು ಬಿದ್ದಿಹುದುದೋಷವೆಂಬುದು ಅಡಗಲಿಲ್ಲ ದುಷ್ಕøತವೆಂಬುದು ಒಣಗಲಿಲ್ಲಕ್ಲೇಶ ಪಂಚಕದ ವಿಷಯದಿ ಕೆಡೆದಿಹ ಮನುಜರಿಗೆ 1 ಕಾಮವೆಂಬುದು ಕಡಿಯಲಿಲ್ಲ ಕ್ರೋಧವೆಂಬುದು ಅಳಿಯಲಿಲ್ಲತಾಮಸವೆಂಬುದು ಶರೀರ ತುಂಬಿಕೊಂಡಿಹುದುಕಾಮಿತವೆಂಬುದು ಹೋಗಲಿಲ್ಲ ಕಷ್ಟವೆಂಬುದು ನೀಗಲಿಲ್ಲಪಾಮರರಾಗಿ ದಾಹಕೆ ಸಿಕ್ಕುಬಿದ್ದಿಹ ಮನುಜರಿಗೆ2 ಮೋಹವೆಂಬುದು ಹರಿಯಲಿಲ್ಲ ಮೂರ್ಖತೆಯೆಂಬುದು ಕರಗಲಿಲ್ಲಊಹೆ ಎಂಬ ಕುಬುದ್ಧಿಯು ಉಡುಗಲಿಲ್ಲದೇಹ ಶೋಧನೆ ತಿಳಿಯಲಿಲ್ಲ ದೇಹಿ ಚಿದಾನಂದ ಅರಿಯಲಿಲ್ಲಕಾಹುರ ಮದದಲಿ ಮರೆತಿಹ ಮಂಕುವನು ಮನುಜರಿಗೆ 3
--------------
ಚಿದಾನಂದ ಅವಧೂತರು
ಹನುಮನ ಮತದಲಿ ಅನುಮಾನ ಬೇಡವೊ ಮನಮುಟ್ಟಿ ಭಜಿಸಲೊ ಎಲೆ ಮನವೇ ಪ ಸನಕಾದಿ ವಂದಿತ ಮನಸಿಜ ಜನಕ ವನಜನಯನ ಹರಿಗನುಮತವಾದಂತ ಅ.ಪ ವಿಧಿ ಭವಾದಿಗಳಲ್ಲಿ ಅನುಚರರಿವನಿಗೆ ಪರತಂತ್ರರು ವಿವಿಧ ತಾರತಮ್ಯ ನಿರತ ಪೊಂದಿರುವರು ಸಕಲ ಜಗಂಗಳು ನಿಜವೆಂದು ಬೋಧಿಪ1 ಮುಕುತಿಯೆಂಬುದು ನಿಜಾನಂದದ ಅನುಭವ ಭಕುತಿಯೇ ಪಡೆಯಲು ಸಾಧನವು ಪ್ರಕೃತಿ ಸಂಯುತವಾದ ದೇಹವ ಕಳೆಯಲು ಯುಕುತಿ ಬೇರಿಲ್ಲವೆಂದು ಭರದಿ ಸಾರುವಂಥ 2 ನಯನಕೆ ಗೋಚರ ಒಣ ಊಹೆಯಿಂದಲಿ ತಿಳಿಯಲು ಹರಿಯನು ಅಳವಲ್ಲವು ನಿಗಮಗಳಿಂದಲೆ ಅರಿತ ಜ್ಞಾನಿಗೆ ಪ್ರ ಸನ್ನನಾಗುವನೆಂದು ದೃಢದಿಂದರುಹುವ 3
--------------
ವಿದ್ಯಾಪ್ರಸನ್ನತೀರ್ಥರು