ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏತಕೆ ಸಂತತ ಚಿಂತಿಸುವೆ ಪ ಕೋತಿಗೆ ಮದ್ದಿಕ್ಕಿದ ರೀತಿಲಿ ಮನವೆಅ.ಪ ಹಾನಿ ವೃದ್ಧಿಗಳು ತಾನಾಗಿ ಬರುವುದು ಏನೇನು ಮಾಡಲು ಬಿಡಲೊಲ್ಲದು ಜ್ಞಾನವಿಲ್ಲದೆ ವೃಥಾ ಧೇನಿಸಿ ಧೇನಿಸಿ 1 ದೇಹಸಂಬಂಧಿಗಳ ಮೋಹ ಪಾಶಕ್ಕೆ ಸಿಕ್ಕಿ ಸಾಹಸ ಮಾಡುವುದೇನು ಫಲ ಊಹಿಸಿ ನೋಡಲು ಭ್ರಾಂತಿಯದಲ್ಲವೆ 2 ಪೂರ್ವ ಕರ್ಮಾನುಸಾರ ನಡೆಸುವನು ಗರ್ವವಿರಹಿತನು ಗುರುರಾಮವಿಠಲನು 3
--------------
ಗುರುರಾಮವಿಠಲ
ಏನುಧನ್ಯನೊ ಇವನು ಎಂಥ ಪುಣ್ಯನೊ ದೀನದಯಾಳು ಜಾನಕೀಶನ ಧ್ಯಾನ ಮಾಳ್ಪ ಮಾನವನು ಪ ಜ್ಞಾನದಿಂದ ತಿಳಿದು ಜಗ ಶೂನ್ಯವೆಂದು ಊಹಿಸಿ ಮನದಿ ದಾನವಾಂತಕನಾದ ಹರಿಯ ಧ್ಯಾನವೊಂದೇ ಕಾರಣೆಂದು ಜ್ಞಾನಬೆಳಗಿನೊಳಗೆ ನೋಡಿ ಆನಂದಿಸುತಲ್ಹಿಗ್ಗುವವ 1 ಆಶಪಾಶಗಳನು ನೀಗಿ ಈ ಮೋಸಮಯ ಸಂಸಾರದೊಳು ವಾಸನಾರಹಿತನಾಗಿ ಸದಾ ದಾಸಸಂಗಸುಖಪಡೆದು ಈಶ ಭಜನೆಯೊಳ್ಮನವಿಟ್ಟು ಈಸಿಭವಾಂಬುಧಿ ಪಾರಾಗುವವ 2 ನಂಬಿಗಿಲ್ಲದ ದೇಹವಿದನು ನಂಬಿನೆಚ್ಚಿ ಸಂಭ್ರಮಿಸದೆ ಕಂಬುಕಂಧರ ಶಂಭುವಿನುತ ಅಂಬುಜಾಕ್ಷ ಶ್ರೀರಾಮನ ನಂಬಿ ಗಂಭೀರಸುಖದೊಳಿರುವವ 3
--------------
ರಾಮದಾಸರು
ಕರ್ಮವೆ ನಿತ್ಯನಿರ್ಮಲ ಮೂರುತಿ ಇರುವನು ಎಲ್ಲೆ ಕರ್ಮ ಮಾಡಲು ಬರುವನವೆಲ್ಲೆ ಪ ಹೆಣ್ಣು ಹೊನ್ನು ಮಣ್ಣು ಘಳಿಪುದಲ್ಲದೆ ಕರ್ಮ ಕರ್ಣ ಜಿಹ್ವೆಂಗಳು ಮಾಳ್ಪವು ಕರ್ಮ ಉಣ್ಣುವುದುಡುವುದಲ್ಲದೆ ಪ್ರತಿನಿತ್ಯದ ಕರ್ಮ ಅಣ್ಣನ್ಯಾರು ಸಂಪÉ್ರೀರಕ ತಿಳಿಯಲು ಧರ್ಮ 1 ಕರ್ಮ ವಲ್ಲವೆ ಮೋಹಿಪ ಹೆಂಡತಿಯ ರಕ್ಷಣ ಕರ್ಮವಲ್ಲವೆ ದೇಹ ಜಾತರನ್ನೋದುವುದು ತಮವಲ್ಲವೆ ಊಹಿಸಿ ಹರಿಸೇವೆ ಇದೇ ಧರ್ಮವಲ್ಲವೇ 2 ಕರ್ಮ ತಿಳಿಂiÀiಲಾ ಸಂಗ ನಿಜಾರ್ಧಾಂಗಿಯೊಡನೆ ಕರ್ಮವರಿಯಲಾ ಮಂಗಳ ವಾದ್ಯಗಳ ಶ್ರವಣ ಕರ್ಮವಹುದಲಾ ರಂಗಗರ್ಪಣವೆನ್ನೊಲಿವÀ ನರಸಿಂಹವಿಠ್ಠಲಾ 3
--------------
ನರಸಿಂಹವಿಠಲರು
ನೋಡುವ ಬನ್ನಿ ಪೂಜೆ ಮಾಡುವ ಬನ್ನಿ | ಪಾಡಿ ನಲಿದಾಡುತಲಿ ಎನ್ನೊಡೆಯಾ ಲಿಂಗಗ ಪ ದೇಹ ದೇವಾಲಯದಲ್ಲಿ ಹೃದಯ ಜಲ ಹರಿಯಲಿ | ಊಹಿಸಿ ನೆಲೆಯಾಗಿ ಹೊಳೆವ ಆತ್ಮಲಿಂಗಗ 1 ಜ್ಞಾನದಭಿಷೇಕ ಸಮ್ಯಕ್ ಜ್ಞಾನದಾ ವಸ್ತ್ರ ನೀಡಿ | ಧ್ಯಾನದೀಪಾ ಸಂಚಿತದ ಧೂಪಾರತಿಯಾ ಲಿಂಗಗ 2 ಭಾವಭಕ್ತಿ ಗಂಧಾಕ್ಷತೆ ಸುಮನ ಪುಪ್ಪದಲಿಂದು ಅವಗು ಸುವಾಸನೆಯು ಪರಿಮಳ ಲಿಂಗಗ 3 ಘನ ಗುರು ಮಹಿಪತಿ ಸುತ ಪ್ರಭುಲಿಂಗಗ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕ್ತನಾಗೋ ಹರಿಗೆ ಓ ಮನುಜ ಪ ನಾಲಗೆಯಲಿ ಶ್ರೀಲೋಲನ ನಿಜಗುಣ ಜಾಲವ ಕೊಂಡಾಡೋ ಓ ಮನುಜ 1 ಮಾನಸದಲಿ ಸದಾ ಜಾನಕಿ ರಮಣನ ಧ್ಯಾನವ ಮಾಡುತಿರೋ ಓ ಮನುಜ2 ಕರಯುಗಳಗಳಿಂ ವರಗೋಪಾಲನ ಚರಣ ಪೂಜೆಮಾಡೋ ಓ ಮನುಜ 3 ರವಿಕುಲ ತಿಲಕನ ಸುವಿಮಲ ಚರಿತೆಯ ಕಿವಿಯಲಿ ಕೇಳುತಿರೋ ಓ ಮನುಜ4 ಶ್ರೀಹರಿಯ ಜಗನ್ಮೋಹನ ಮೂರ್ತಿಯ ಊಹಿಸಿ ನೋಡುತಿರೋ ಓ ಮನುಜ 5 ಶಾಸ್ತ್ರ ಸಿದ್ಧವಹ ಕ್ಷೇತ್ರತೀರ್ಥಗಳ ಯಾತ್ರೆಯ ನೀಮಾಡೋ ಓ ಮನುಜ 6 ಶ್ರೀಶಗರ್ಚಿಸಿದ ಸುವಾಸಿತ ತುಲಸಿಯ ನಾಸಿಕದಲಿ ಮೂಸೊ ಓ ಮನುಜ7 ಸಾಧುಜನಗಳಿಗೆ ಮೋದವೀವ ಶ್ರೀ ಪಾದಗಳಿಗೆ ನಮಿಸೋ ಓ ಮನುಜ 8 ಭೋಗಿಶಯನಗನುರಾಗದಿಂದ ಶಿರ ಬಾಗಿ ಸತತ ನಡೆಯೋ ಓ ಮನುಜ 9 ಈಜಗದಲಿ ತಾ ಜಾಜಿ ಶ್ರೀಶನು ರಾಜಿಪುದನು ಕಾಣೋ ಓ ಮನುಜ 10
--------------
ಶಾಮಶರ್ಮರು