ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡುವುದಿಲ್ಲದೆ ಪೋದ ಕಣ್ಣು ನಾಲಗೆಯಾ ಎ- ನ್ನೊಡೆಯನಲ್ಲಾನು ಊಳಿಗನಲ್ಲವೆ ಚನ್ನಾ ಪ ಕೊಂದು ಬಳಲಿಸುತಿರುವುದಿದು ಧರ್ಮವೇ ಮುಂದೆ ನಂಬುವರಿಗೆ ಅದೃಢವಾಗದಿರು ದೇವ ಕಂದರ್ಪಪಿತನೆ ಕಮನೀಯಮೂರುತಿಯೆ 1 ನೋಡುವುದೆಂತೊ ಕಣ್ಣಿಲ್ಲದಿರೆ ನಿನ್ನ ತುತಿ ಮಾಡುವುದೆಂತೊ ನಾಲಿಗೆಯುಡುಗಲು ಬೇಡುವುದೆಂತೊ ಕೈವಲ್ಯಂಗನೆಯನು ದಯ ಮಾಡೆನ್ನ ನಲ್ಲ ದಾಸರೊಳುತ್ತಮೊತ್ತಮ ನೇ 2 ಕಮಲ ಮಧ್ಯದೊಳಾವಾಗ ವಾಸವಾಗಿಪ್ಪ ಸರ್ವೇಶ್ವರನೇ ಘಾಸಿಬಡಿಸಲು ಅವರ ನೋವು ನಿನಗಲ್ಲವೇ ಕೇಶವ ಮುರಾರಿ ಅಚ್ಚುತದಾಸನಿಗೆ ಬೇಗ3 ಕೇಳಿದನೆ ನಿನ್ನಿತರ ಹಲವು ಚಿಂತೆಯಲಿ ತೊಳಲಿ ನೆಲೆಯರಿಯದಜ್ಞಾನಿಯಾಗಿ ಬಳಲುವತಿಚಂಚಲಗೀ ಮಾರ್ಗವಿರಿಸಿದೇಕೋ ನಳಿನಾಕ್ಷ ಭಕ್ತವತ್ಸಲ ಕೃಪಾಸಿಂಧೂ 4 ಶರಣರಕ್ಷಕನೆಂಬ ಬಿರುದಾರದೆಲೆ ದೇವ ಇರಿಸು ಎಂದಿನವೋಲಚ್ಚುತದಾಸನಾ ಹರಿಯದಿದ್ದರೆನ್ನ ಕಣ್ಣು ನಾಲಿಗೆಯ ಕಿ ತ್ತಿರಿಸುವೆನು ಮುಂದೆ ವೈಕುಂಠವಿಠಲ ಚನ್ನಿಗರಮಣ5
--------------
ಬೇಲೂರು ವೈಕುಂಠದಾಸರು
ಹೇಳುತಿ ಕೇಳುತಿ ಏನಿಲ್ಲವೊ ಆಳಿದಾ ಊಳಿಗನ ಬಾಳಿವಿನ್ನೇನೊ ಪ ಭಾರ ಬೆನ್ನಲಿ ಪೊತ್ತು ದೂರದೊಳು ಮುಳುಗಿ ಭೂಭಾರ ನೆಗಹಿ ಧೀರ ಕರ್ಣವು ಮಂದವೊ ಹ್ಯಾಗೊ ತಿಳಿಯದು ಘೋರ ದೈತ್ಯನ ಕೊಲ್ಲೊ ಚೀರಾಟವೊ 1 ಮೇದಿನಿ ಪತಿಯ ತುತಿಸುವ ಭರದಿ ನೀ ಧನುರ್ವೇದಗಳನೋದಿಸುವ ನಿರ್ಭರವೊ ಕಾದÀುವ ರಾಕ್ಷಸರ ಕುಲದ ಕೂಗ್ಯಾಟವೊ ಮೋದದಿ ಗೋಪಿಯರ ಕೋಲಾಟವೊ 2 ಬತ್ತಲೆ ನಿಂತು ನುಡಿಯಲಿ ಬಾರದೊಯೆಂತೊ ಹತ್ತಿದ ವಾಜಿಯು ನಿಲ್ಲದೇನೊ ಇತ್ತ ಬಾರೊ ವಾಸುದೇವವಿಟ್ಠಲರೇಯ ಮತ್ತೆ ಹೇಳೊ ನಿಲ್ಲೊ ಬಾಯೆಂತಲೆನ್ನ 3
--------------
ವ್ಯಾಸತತ್ವಜ್ಞದಾಸರು