ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೊಂಡ ನೆನಿಸ ಬೇಡ ಹರಿಯೇ ಪ ಪುಂಡರೀಕಾಕ್ಷನೆ ಕಾವ ತೊಂಡರ ತೊಂಡನೆನಿಸೋ ಅ.ಪ. ಹೆಂಡತಿಯ ಬಿಡಬಹುದು-ಕಾಡಿಗ್ಹೋಗಲಿ ಬಹುದು ಬಿಡದೆ ಜಪಿಸಲಿ ಬಹುದು-ಕಟುತಪವ ಮಾಡಲಿಬಹುದು ಒಡೆಯ ಕೃಷ್ಣನೆ ನಿನ್ನ ಅಡಿಯ ಕಾಡಲಿಬಹುದು ಕಂಡವರ ಊಳಿಗದಿ ಕೀರ್ತಿ ಪಡೆಯಲಾಗದೊ ದೇವ 1 ಆಶೆಯ ತೊರೆದು ನಿಜ ದಾಸನಾಗಲಿಬಹುದು ದೇಶ ದೇಶವ ತಿರುಗಿ ಕಾಸುಗಳಿಸಲಬಹುದು ಕೇಸರಿಯ ಹಿಡಿತಂದು ಪಾಶದಲಿ ಕಟ್ಟಬಹುದು ಶ್ರೀಶನಿನಗಲ್ಲದವರ ಸಂಗ ಏಸೇಸು ಜನ್ಮಕ್ಕು ಬ್ಯಾಡೋ 2 ಹೀನ ಜನರಾ ಸಂಗ ಮಾನವಂತರಿಗಲ್ಲ ದೀನಜನಮಂದಾರ ಕೊಡಬೇಡ ಇದು ಎನಗೇ ಮಾನಾಭಿಮಾನವನು ನಿನಗೆ ಒಪ್ಪಿಸಿದೆನೋ ಇನ್ನಾದರೂ ಸಲಹೋ ಶ್ರೀನಿವಾಸ ಕೃಷ್ಣವಿಠ್ಠಲನೆ ಜೀಯಾ 3
--------------
ಕೃಷ್ಣವಿಠಲದಾಸರು