ಇಂತುಯನ್ನಾ ಬಯಕೆ ಕೈಗೂಡಿಸೋ ದೇವಾ
ಅಂತರ, ಗಲಿದೇ ಹಂಬಲಿಸುತಿದೇ ಜೀವಾ ಪ
ನಿನ್ನ ಸಿರಿಪದಾ ಸಖಚಂದಿರದಲಿ
ಎನ್ನ ಕಂಗಳು ಚಕೋರಾಗಿ ನೋಡಲಿ
ನಿನ್ನ ಕಥೆಯಾ ಘನ ಗರ್ಜನೆಯಲಿ
ಘನ್ನ ಶ್ರವಣ ಮಯವಾಗಿ ನಲಿಯಲಿ 1
ನಿನ್ನ ನಾಮಾ ಮೃತ ಫಲ ಸೇವಿಸಲಿ
ಎನ್ನ ನಾಲಿಗೆ ಶುಕವಾಗಿರಲಿ
ನಿನ್ನ ಚರಣಾರ್ಪಿತ ತುಲಸಿ ಕುಸುಮದಲಿ
ಎನ್ನ ಪ್ರಾಣವು ಮಧುಪಾಗಿ ಕೂಡಲಿ 2
ನಿನ್ನ ಮನೆಯಾಶೆಯಾ ಊಳಿಗದಲಿ
ಎನ್ನಂಗ ನಿರುತ ಮಾರಿಸಿ ಕೊಳ್ಳಲಿ
ಘನ್ನ ಗರು ಮಹಿಪತಿ ಪ್ರಭು ಯಚ್ಚರದಲಿ
ನಿನ್ನಂಕಿತದಾ ಜನ್ಮಗಳೇ ಬರಲಿ 3