ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟೇಶ ವಿಠ್ಠಲನೆ ಉದ್ಧರಿಸೊ ಇವಳಾಪಂಕಜಾಸನ ವಂದ್ಯ ಪಂಕೇರು ಹಾಕ್ಷ ಪ ಪತಿ ವಿಯೋಗದ ದುಃಖ | ಅತಿಯಾಗಿ ತವಪಾದಗತಿಗಾಗಿ ಗಿರಿಯೇರಿ | ತುತಿಸುತಿರೆ ನಿನ್ನಾಗತಿಗೋತ್ರ ತೈಜಸನೆ ಪತಿರೂಪ ನಿನ್ನನುಪತಿಕರಿಸ ನಿನ್ನ ಮೃತ ಹಸ್ತ ನೆತ್ತಿಲಿ ಇಟ್ಟೇ 1 ಇಂದಿವಳ ಪ್ರಾರ್ಥನೆಯ ಛಂದದಲಿ ಮನ್ನಿಸುತಅಂದು ನೀನಾಗಿತ್ತ | ನಂದದಂಕಿತವಾಇಂದು ಊರ್ಜಿತ ಪಡಿಸಿ | ವಂದಿಸಿಹೆ ತವಪಾದವೃಂದಾರ ಕೇಂದ್ರ ಗುರು ನಂದ ಮುನಿ ವಂದ್ಯಾ 2 ಪಕ್ಷಿವಾಹನ ದೇವ | ದಕ್ಷಾರಿ ಪ್ರಿಯ ಸಖನೆದೀಕ್ಷಿತಳ ದಾಸಪಥ | ಲಕ್ಷಿಸುತಲಿದನಾಈಕ್ಷಿಪುದು ಕರುಣಾಕ | ಟಾಕ್ಷದಲೆಂದನುತಅಕ್ಷಾರಿ ವಂದ್ಯ ಹರಿ ಪಾರ್ಥಿಸುವೆ ನಿನ್ನಾ 3 ದೇಶ ದೇಶದ ಜನರ | ಆಶೆಗಳ ಪೂರೈಪ ಕೇಶವನೆ ಶ್ರೀ ವೆಂಕಟೇಶಾಖ್ಯ ಹರಿಯೇ |ದಾಸಿಯಳ ಹೃದಯಾ | ಕಾಶದೊಳು ತೋರೆಂದುಲೇಸು ಭಿನ್ನಪ ಸಲಿಸೊ | ಮೇಶ ಮಧ್ವೇಶಾ4 ಊರ್ವಿಯೊಳು ನಿನ್ಹೊರತು ಕಾವರನು ನಾಕಾಣೇಸರ್ವೋತ್ತಮೋತ್ತಮನೆ | ಶರ್ವ ವಂದ್ಯಾದರ್ವಿ ಜೀವಿಯ ಕಾವ | ಹವಣೆ ನಿನ್ನದಲ್ಲೇನೊ ಗುರ್ವಂತರಾತ್ಮ ಗುರು | ಗೋವಿಂದಾ ವಿಠಲಾ 5
--------------
ಗುರುಗೋವಿಂದವಿಠಲರು
ಶರಣು ಶರಣುಶರಣು ದಶರಥ ರಾಮದೂತಗೆ ಪ ಶರಣು ಕುರುಕುಲಾಧೀಶಗೆಶರಣು ವೈಷ್ಣವ ಮತ ವಿಲಾಸಗೆಶರಣು ಮುಖ್ಯಪ್ರಾಣಗೆ ಅ ವಾರಿಧಿಯನು ವೇಗದಿ ದಾಟಿ ವನವ ಕಿತ್ತಿದಾತಗೆಮೇರೆಯಿಲ್ಲದೆ ಅಸುರರ ಸಂಹರಿಸಿದ ರಣಶೂರಗೆವಾರಿಜಾಕ್ಷಿ ಸೀತಾದೇವಿಗೆ ವರದ ಮುದ್ರಿಕೆಯನಿತ್ತಗೆಧೀರತನದಲಿ ಅಕ್ಷಕುಮಾರನ ಪ್ರಾಣವನು ಕೊಂಡಗೆ 1 ರಾಜಸೂಯವ ರಚಿಸಬೇಕೆಂದು ರಾಜರ ಸೀಳಿದಾತಗೆರಾಜಮುಖಿಯಳ ರಕ್ಷಿಸಿ ಮೃಗರಾಜಗೆ ಒಲಿದಾತಗೆತ್ರಿಜಗವಂದಿತ ದೇವಗೆ ಸಜ್ಜನಪ್ರಿಯ ಎನಿಪಗೆರಾಜ ಧರ್ಮಗೆ ಅನುಜನಾದಗೆ ರಾಜಪೂಜಿತ ರಾಜಗೆ2 ಧಾರಿಣಿಯೊಳು ದುರ್ವಾದಿ ದೈತ್ಯರ ಗಂಟಲಗಾಣವಾದಗೆಮೂರೇಳು ಮತವನೆಲ್ಲ ಮುರಿದ ಧೀರ ಮಧ್ವರಾಯಗೆಸಾರ ತತ್ತ್ವಗಳನೆಲ್ಲ ಶೋಧಿಸಿ ಸೂರೆ ಮಾಡಿದಾತಗೆಊರ್ವಿಯೊಳು ವರ ದೇವತಾದಿಕೇಶವ ದೊರೆ ದಾಸಗೆ 3
--------------
ಕನಕದಾಸ