ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕವಿಗಳು ಪೊಗಳುವ ವಿವರವ ಪೇಳುವೆ ಪ ಅವನಿಯೊಳ್ ಕೃಷ್ಣನು ಅವತರಿಸುವ ಕಥೆ ಅ.ಪ ಸುರರೊಡೆಯನ ದಿವ್ಯ ತರುವನು ಬಲದಲಿ ಸರಸಿಜನಾಭನು ಧರೆಗೆ ತರುವನೆಂದು ಅರಿಯುತ ವರ ಸುಮನಸರೆಲ್ಲ ಕರಗಳಿಂದಲಿ ಸುಮ ಸುರಿದರೆಂದೆನುತಲಿ 1 ಅಂಬುಜನಾಭನು ಶಿಶುವಾಗಿರಲವನ ಸಂಭ್ರಮದಲಿ ತನ್ನ ವಶಗೊಳುವುದಕೆ ತುಂಬುರು ಗಂಧರ್ವರು ಪಾಡಿದರು ರಂಭೆ ಊರ್ವಶಿಯರು ನೃತ್ಯ ಮಾಡಿದರೆಂದು2 ವಾಸುದೇವನು ತನ್ನ ಶಿಶುವೆಂದರಿಯುತ ವಸುದೇವನ ಬಲು ಆಸೆಗೆ ನಗುತಲಿ ವಸುಗಳು ದೇವರು ವಾಸುದೇವನು ತಮ್ಮ ಕೂಸು ಏಕಲ್ಲವೆಂದು ಹರುಷ ಪೊಂದಿದರೆಂದು 3 ಇಂದುವದನನ ಅಂದವ ನೋಡುತ ಚಂದ್ರಕಲೆಯರ್ಧ ಕುಂದಿದನೆನ್ನುತ ಸುಂದರಕೃಷ್ಣನು ಅಂದು ತನ್ನಯ ಕುಲ ದಿಂದ ಬಂದಿರೆ ಬಲು ನಂದ ಪೊಂದಿದನೆಂದು 4 ಪನ್ನಗಶಯನನು ಸಣ್ಣ ಕೂಸಾಗಿರೆ ತನ್ನ ವಿಭುತನಕೆ ಇನ್ನು ಕುಂದಿಲ್ಲವೆಂದು ಉನ್ನತ ಗಗನ ಪ್ರಸನ್ನನಾಗಿ ದಿವ್ಯ ಸಣ್ಣ ತಾರೆಗಳಿಂದ ಬೆಡಗು ತೋರಿದ ಕಥೆ 5
--------------
ವಿದ್ಯಾಪ್ರಸನ್ನತೀರ್ಥರು
ಕೋಲ ಕೋಲೆನ್ನಿ ಕೋಲಕೋಲೆನ್ನಿ ಮುತ್ತಿನ ಕೋಲಕಾಲ ಕಾಲಕೆ ಸುಭದ್ರಿಯ ಮಾನ ಕಳೆದುನಾಚಿಸಿ ನಗುತಲೆ ಬನ್ನಿಪ. ದೇವ ನಾರಿಯರೆಲ್ಲ ಬಂದರೆ ಅಲ್ಲಿರುವೊ ಗಂಧರ್ವರು ಬಂದರೆಪಾವನ ಸುರರೆಲ್ಲ ಬಂದರೆ ನಮ್ಮ ದೇವರ ನೋಡಬೇಕೆಂದಲೆ 1 ರಂಭೆ ಊರ್ವಶಿಯರು ಬಂದರೆ ತಾಳ ತಂಬೂರಿ ಜನರೆಲ್ಲ ಬಂದರೆ ತುಂಬರ ನಾರದರು ಬಂದರೆ ನಮ್ಮ ಅಂಬುಜಾಕ್ಷನ ನೋಡೆವೆಂದಾರೆ2 ಸಿದ್ದ ಸಾಧ್ಯರೆಲ್ಲ ಬಂದರೆಪ್ರಸಿದ್ದ ನಾಟಕರೆಲ್ಲ ಬಂದರೆ ಸನ್ನದ್ದರಾಯರೆಲ್ಲ ಬಂದರೆ ನಮ್ಮ ಮುದ್ದುರಮೆ ಅರಸನ್ನ ನೋಡೆವೆÀಂದಾರೆ3
--------------
ಗಲಗಲಿಅವ್ವನವರು