ಇ. ದೇವತಾ ಸ್ತುತಿ
ವಾಯುದೇವರು
ಇನ್ನಾದರೂ ಸುಮುಖನಾಗೊ ಧ್ವರಿಯೇ ಪ
ಪರಿ ವಿಧದಿಂದ ನೊಂದು ಕರಮುಗಿದುಬಾಯ್‍ತ್ಯರದು ಕೂಗಿ ಕರಿವೆ ಸದ್ಗುರುರಾಜನೆಂದು ಅ.ಪ.
ಪಾದ ನಂಬಿದ ಭಕ್ತರಿಗಾನಂದಗರಿವೆನೆಂಬ ಬಿರುದಾಂಕಿತನಾಗಿ ಸದ್ವøಂದದೊಳಗಿಪ್ಪೆ ರಾಜಾಚಾರು ಗುರು ಬೃಂದಾವನಾರ್ಯರ ಪೊರೆದ ಮಂದಾಕಿನಿಧರ ಧವಳಾಖ್ಯವಾಸಾ ಭೋಜಾ 1
ಭುವನದೊಳು ಸರಿಗಾಣೆ ನಿನಗಿನ್ನು ಪರಮಾಪ್ತ ಶಿರೋಮಣಿಗಳೊಳು ಸರ್ಜಿಸಿದ ಕಾರಣ ವಜ್ರಲೇಪನ ಮಾಡಿ ಊರ್ಜಿಸುವತ್ಯರ ಮಾಡು ಎನ್ನಾ 2
ಪರಮ ಪಾಮರನು ನಾನಯ್ಯ ಪವಮಾನರಾಯಾಪಾರುಗಾಣದೆ ಶರಧಿಯೊಳು ಮುಳುಗುವ್ಯನೋಕರವಿಡಿದು ತಡಿಗೆತ್ತಿ ಕಾಪಾಡು ತಂದೆವರದಗೋಪಾಲವಿಠಲನ ಮರಿಯೇ 3