ಈ ಊರೋಳ್ಳೇದು ಪ
ದೇವರ ಕೃಪೆ ಒಂದಾದರೆ ಸಾಕು ಅ.ಪ
ತಂಟೆ ಮಾಳ್ಪ ಭಂಟರೈವರ ಗೆದ್ದರೆ
ತಾನೆಲ್ಲಿದ್ದರು ಭಯವಿಲ್ಲಣ್ಣ 1
ಜಲತೃಣ ಕಾಷ್ಠಕೆ ವಸತಿ ಈ ಊರು
ಬಲು ಸಜ್ಜನಗಳ ನೆರೆ ಈ ಊರು
ಫಲಗಳುಂಟು ಮಾಡುವುದೀ ಊರು
ಹೊಲಗದ್ದೆ ತೋಟಗಳಿಹ ಊರು 2
ಕೇಳಿದ ಪದಾರ್ಥ ದೊರೆಯುವ ಊರು
ವೇಳೆಗೆ ಅನುಕೂಲವು ಈ ಊರು
ತಾಳ ಮೇಳ ವಾದ್ಯಗಳಿಹ ಊರು
ಸೂಳೆ ಬೋಕರಿಗೆ ಕಷ್ಟದ ಊರು 3
ಕಷ್ಟಪಡುವ ನರ ಭ್ರಷ್ಟನಲ್ಲವೇ
ಮೂರು ಬಿಟ್ಟು ತಿರುಗುವ ಜನರಿಗೆ 4
ನರಜನ್ಮವೆಂಬ ಊರಿಗೆ ಬಂದು
ಗುರುರಾಮವಿಠ್ಠಲನ ಕರುಣನ ಪಡದರೆಕರತಲಾಮಲಕವಿದು ಕೈವಲ್ಯಕೆ 5