ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಥರವಲ್ಲ ಸ್ವಾಮಿ ಥರವಲ್ಲ ಪ. ಥರವಲ್ಲ ಸ್ವಾಮಿ ಈ ತೆರನ ಮಾಡುವುದು ಕರುಣ ಸಾಗರನೆಂಬ ಬಿರುದಿನ್ನು ನಿಲದು ಅ.ಪ. ಊರೊಳಗಿಹ ಜನರೆಲ್ಲರು ಕೂಡಿ ವಾರಿಜಾಕ್ಷನ ದಾಸನೆಂದು ಕೊಂಡಾಡಿ ಸಾರಿಸಾರಿಗೆ ನಿನ್ನ ಕೀರ್ತನೆ ಮಾಡಿ ಪೋರ ಪೇಚಾಡುವನೆಂಬರು ಕೂಡಿ1 ಪಾರಾಯಣದ ಪುಸ್ತಕವ ಕಟ್ಟಿಟ್ಟು ವಾರಿಜನಾಭ ನಿನ್ನಯ ಪೂಜೆ ಬಿಟ್ಟು ಕಾರಿ ಕೆಮ್ಮುತ ಬಿದ್ದಿರುವ ದೊಡ್ಡ ಗುಟ್ಟು ಯಾರ ಮೇಲಿನ್ನು ತೋರಿಸಲೆನ್ನ ಸಿಟ್ಟು 2 ಮೋಹ ಪಾಶದಿ ಮುಸುಕಿ ಕಟ್ಟಿದರೆ ಬಹ ಪಾತಕಗಳಿಗೆಲ್ಲ ನಾನಿದಿರೆ ನೀ ಹದಿನಾಲ್ಕು ಲೋಕೇಶನೆಂದೊದರೆ ದೇಹವ ಬಳಲಿಸಿದರೆ ನಾನೇನ್ಹೆದರೆ 3 ನಂಬಿರೊ ಭಕ್ತ ಕುಟುಂಬಿಯನೆಂದು ಅಂಬುಜಸಂಭವನ್ಯಾಕೆಂದನಂದು ಹಂಬಲಿಸಿದರು ನೀ ದಯದೋರದಿಂದು ಬೊಂಬೆಯೆ ಸರಿಯೆಂದು ಜನರೆಂಬೊ ಕುಂದು 4 ಸರ್ವದೋಷಹರ ಸಾಗರಜೇಶ ನಿರ್ವೇದದಿಂದ ನಾ ನುಡಿದೆನಾಕ್ರೋಶ ಸರ್ವಕಾಲಕು ಸಲಹುವ ನೀನೆ ಶ್ರೀಶ ಶರ್ವಾದಿ ವಂದ್ಯ ಶೇಷಾಚಲವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ