ಸಲಹಯ್ಯಾ ಲಕ್ಷೀರಮಣ ಸರುವದ ನಮ್ಮನು ನೀ ಪ
ಊರೊಳಗಿರಲಿ ಊರು ಬಿಟ್ಟಿರಲಿ
ದಾರಿಯ ಬಿಟ್ಟು ನಾ ಸಂಚರಿಸುತಿರಲಿ
ಮಾರಮಣ ಮುರಾರಿ ನಿನ್ನಯ ಪಾದ
ವಾರಿಜನ ನಂಬಿ ಸೇರಿದ ಭಕುತರ 1
ಸಿರಿಯೆನಗಿರಲಿ ಎಡರೆನಗಿರಲಿ
ಮರುಳುತನವೆನಗೇ ಆವರಿಸಿರಲಿ
ನರಹರಿ ನಿನ್ನಯ ಚರಣದ ಮಹಿಮೆಯ
ಪರಿಪರಿಯಿಂದ ಪೊಗಳುವ ಮತಿಯಿತ್ತು 2
ದೊರೆತನ ಬರಲಿ ತಿರುಕನು ಆಗಲಿ
ಬಂದೆ ಡಂಭದೊಳು ತಿರುಗುತಲಿರಲಿ
ಕರಿವರದ ಶ್ರೀ ರಂಗೇಶವಿಠಲ ನಿನಮರೆಯದೆ ಹರುಷದಿ ನೆನೆವಂತೆ ಮಾಡಿ3