ಆವೂರು ಈ ಊರು ಯಾವೂರು ಆದರೇನು ಪ
ಕಾವೋರು ಶ್ರೀಹರಿ ಲೇಸಾಗಿ ಇರಲೂ ಅ.ಪ
ನೀರಜನಾಭನ ಕಾಳಿಂಗ ಮಥನನ ಪಾರಿಜಾತವ ತಂದ
ರುಕ್ಮಿಣಿ ಪತಿಯ ಸಾರುತ್ತ ಪಾಡುತ್ತ ಪೊಗಳುತ್ತಬೇಡುತ್ತ
ಚರಣಾವ ನೆರೆನಂಬಿ ತಿರುಗುವ ದಾಸರಿಗೆ1
ಆರು ಆಳಿದರೇನು ಆರು ಅಳಿದರೇನು
ಮಾರುವ ಧಾರಣಿ ಏರಿದರೇನು ಇಳಿದರೇನು
ಊರೆಲ್ಲ ಎದುರಾದರೇನು ಹಿತವಾದರೇನು
ಕರಿರಾಜವರದನ ಕೊನೇರಿ ವಾಸನ ಕರುಣವ ಪಡೆದವಗೆ 2
ಕಾಸು ಎಂದರೆ ಪ್ರಾಣ ಸಾಮಾನ್ಯಜನರಿಗೆ
ಈ ಶರೀರವ ಕಷ್ಟದಿ ಬಿಡುವಾಗ ಬಾಹುದೈ
ಪಾದ ಸೋಮಶೇಖರ ವಂದ್ಯ
ಶೇಷಗಿರೀಶನ ದಾಸಾನು ಎಂತೆಂದು ಕುಣಿವವಗೆ 3
ಮೂರುಲೋಕದ ಅರಸು ಸಾರಂಗ ಪಾಣಿಯು
ನೀರಜಭವಾಂಡ ಉದಯಕೆ ಕಾರಣ ಅಷ್ಟಕರ್ತ
ಸಿರಿಪದ್ಮಜಾಸನ ವಂದ್ಯ ದೇವಾದಿದೇವನ
ಮೀರಿ ನಡೆವುದುಂಟೆ ಈ ಚರಾಚರ ಜಗದೊಳು ಮನವೇ4
ಊರೆಲ್ಲನೆಂಟರು ಉಣಬಡಿಸುವರಿಲ್ಲ
ಸಿರಿಯಿದ್ದಕಾಲಕ್ಕೆ ಎಲ್ಲರು ನೆಂಟರಯ್ಯ
ಸಿರಿತನ ತಾ ತಪ್ಪಿ ಬಡತನ ಬಂದರೆ
ನಡಿನಡಿಯೆಂಬರು 5
ಹರಿ ಊರು ನಮ್ಮೂರು ಹರಿವೋರು ನಮ್ಮೋರು
ಹರಿನಾಮ ಬಂಧುವು ಹರಿನಾಮ ಬಳಗ
ಹರಿಹರಿ ಎಂದರೆ ದುರಿತವು ಪರಿಹಾರ
ಹರಿಗುರು ಚರಣವೆ ಪರಗತಿ ಸಾಧನ ಮನವೇ 6
ಕೋರಿ ಕೋರಿದ ವರವ ನೀಡುವ ಪ್ರಭುವು
ಸಿರಿಜಯಮುನಿ ಹೃಸ್ಥವಾಯುಗ
“ ಶ್ರೀ ಕೃಷ್ಣವಿಠಲಾ” ಸಾರಿದ ಜನರನು ಪೊರೆಯುವ
ಕರುಣದಿ ನೆರೆನಂಬುಮನವೆ ಭಯಬೇಡ ಮನವೇ7