ಹುಚ್ಚು ಹಿಡಿಯಬೇಕು ಭಜನೆಯ
ರಚ್ಚೆ ತೊಡಗ ಬೇಕು ಪ
[ಮೆಚ್ಚುತ] ಅಚ್ಯುತನಾಮವ
ಉಚ್ಚರಿಸುತಲಿರೆ ಕಿಚ್ಚೂ ಮಂಜಹುದು ಅ.ಪ
ನೇರುತಲಿರಬೇಕು
ಊರುಹೆಜ್ಜೆಗೂ ನಾರಾಯಣ ನಾಮೋ
ಚ್ಚಾರದ ಹಸಿವು ಬಾಯಾರಿಕೆಯಾಗುವತನಕ 1
ಕೀರ್ತನೆಯಲಿ ಮುಳುಗಿ ಕೃಷ್ಣನ
ಮೂರ್ತಿಯ ಕಾಣುತಲಿ
ಪಾರ್ಥಸಾರಥಿಯವ ಅನಾಥರಕ್ಷಕನೆಂಬ
ಕೀರ್ತಿಯನಾಂತ ಮಾಂಗಿರಿಯ ಭಜನೆಯಾ 2