ನೋಡುವೆನು ನೋಡುವೆನು ತೋರಿಸುನಿಮ್ಮ ನೋಡುವೆ ಪ
ಮದನ ಜನಕನೊಳು ಕದನ ಮಾಡಿದ ದು-ರ್ಯೋಧನನ ಶಿರದೊಳಿಟ್ಟ ಪದುಮ ಪಾದಗಳನು 1
ನೂರುಗಾವುದ ಜಲ ಹಾರುವಾಗಲೆ ದಿವ್ಯಭೂರುಹ ಕೆಡದಿಹ ಊರುಗಳನ್ನು ಸ್ವಾಮಿ 2
ಕೆಟ್ಟ ಬಕನ ಕೊಂದು ಅಷ್ಟು ಅನ್ನವನುಂಡಹೊಟ್ಟಿ ನೋಡುವೆ ದಿವ್ಯ ದೃಷ್ಟಿ ನೀಡಿರಿ ಸ್ವಾಮಿ 3
ಭೂಮಿ ಸುತೆಯ ವಾರ್ತೆ ರಾಮನು ಕೇಳಿದಾಪ್ರೇಮಾಲಿಂಗನವಿತ್ತ ಆ ಮಹಾವುರವನ್ನೆ 4
ಮದಗಜಗಳ ಕೂಡ ಕದನ ಮಾಡಿದ ದಿವ್ಯಗದೆಯ ಪಿಡಿದ ಕರವದು ಮಗಳನು ಸ್ವಾಮಿ5
ಅಜಗರ ನಹುಷನ ವಿಜಯ ಸಹೋದರ ಪದುಮನಾಭನ ಗುಣಮುದದಿ ಸಾರುತ ದೈತ್ಯ ಕದನಗೆಳೆದ ನಿನ್ನ ವದನಕಮಲವನ್ನು 6
ವೇದ ಶಾಸ್ತ್ರಗಳನ್ನು ಓದಿ ಹೇಳುತ ಶಿಷ್ಯಮೋದಗರೆವ ನಿನ್ನ ವಾಣಿ ಸ್ವಾದು ಕೇಳುವೆ ನಿನ್ನ 7
ಇಂದಿರೇಶನ ದಯದಿಂದ ಗೆಲಿದಿ ಇಪ್ಪ-ತ್ತೊಂದು ಮತವ ಆನಂದ ತೀರ್ಥರೆ ನಿಮ್ಮ 8