ವೃಂದಾವನ ನೋಡಿದೆ | ಸತ್ಯ ಪ್ರೀಯರವೃಂದಾವನವ ನೋಡಿದೇ ಪ
ಸತ್ಯ ಪೂರ್ಣ ಕರಜರೆನಿಸಿ | ಸುತ್ತಿಕ್ಷೇತ್ರಗಳನೆಲ್ಲಮತ್ತೆ ಬರಲು ಶ್ರೀರಂಗಕ್ಕೆ | ಫತ್ತೇಸಿಂಗ ಭೇಟಿಯಾದ 1
ಶತೃಗಳ ಗೆದ್ದು ಬಂದು | ಸತ್ಯಪ್ರಿಯರಿಗೆರಗಿ ಅವನೂ ಇತ್ತು ಊರುಗಳನೆರಡು | ನೆತ್ತಿ ಚಾಚಿ ನಮಿಸೀದ 2
ಮಾನಮಧುರಿ ಊರಿನಲ್ಲಿ | ಪ್ರಾಣೋತ್ಕ್ರಮಣ ಸಮಯದಲ್ಲಿಜ್ಞಾನಿ ರಾಮಾಚಾರ್ಯರಿಗೆ | ದಾನ ಮಾಡ್ದ ತುರ್ಯಾಶ್ರಮ 3
ಮಾಧವನ ದಯದಿಂದೆ | ಸಾಧಿಸುತ ಬದರಿ ಯಾತ್ರೆವೇದವತಿ ತೀರದಲ್ಲಿ | ಸಾಧುಗಳ ವೃಂದಾವನ 4
ವೇದ ವೇದ್ಯನಾದ ಗುರು | ಗುರುಗೋವಿಂದ ವಿಠಲನಮೋದದಿಂದ ಭಜಿಸುತ್ತ | ಆದರದಿ ಧ್ಯಾನಾಸಕ್ತ 5