ಒಬ್ಬನೆ ದಾಸ ಹುಟ್ಟಿದವನಿವ | ನೊಬ್ಬನೆದಾಸ ಪ
ಸೂರಿ ತಾಯಿತಂದೆಗಳಿಂದಾಯಿತು ಅ.ಪ
ನಾಲ್ಕು ವರ್ಷದವರೆವಿಗೂ ಮಾತಾಪಿತರು
ಪಾಲನೆಗೈದರು ಬಳಿಕ
ಕಾಲಾಧೀನವನೈದಿದರವರಾ
ಮೇಲೆ ನಡೆದ ಕಥೆಯನು ಬಿನ್ನೈಸುವೆ 1
ದ್ವಾದಶ ವರುಷ ಪರಿಯಂತವು
ಮಾತುಳನ ಗೃಹದಿ ಬೆಳೆದು
ಪಾದವೂರದೆ ದೇಶವÀ ತಿರುಗುತ-
ಲಾದುದು ಇಪ್ಪತ್ತುನಾಲ್ಕು ವರುಷವು 2
ಶ್ರೀರಮಣ ಗುರುದ್ವಾರದಲಿ ಇಪ್ಪತ್ತು
ಮೂರನೆಯ ವರುಷದಲಿ
ಸಾರವ ತಿಳುಹಿಸಿ ಅನುಗ್ರಹಿಸಿದನ-
ಪಾರ ಸುಗುಣನಿಧಿ ಕೈಪಿಡಿದೆನ್ನನು 3
ಹರಿನಾಮಬಲದಿಂದಲಿಪ್ಪತ್ತೈದು
ವರುಷದ ಮೊದಲು ಸುಕೃತದಿಂ
ಹರಿಸೇವೆಗಳಿಂ ನೆರೆದ್ರವ್ಯಗಳಿಸಿ
ನಲವತ್ತು ವರುಷವಾಯಿತು 4
ನಲವತ್ತೊಂದನೆ ವರ್ಷಮೊ-
ದಲು ಬಲು ಜನಗಳ ಬೇಡಿ
ಕಳೆದಿತು ಐವತ್ತಾರು ವರ್ಷಗಳು 5
ಮಧ್ವರಾಯರೆ ನಮ್ಮ ತಂದೆಯು
ಮಧ್ವರಾಯರೆ ನಮಗೆ ಗುರು
ಮಧ್ವರಾಯರೆ ಉದ್ಧಾರಕರ್ತರು
ಪದ್ಮನಾಭಗತಿ ಪ್ರೀತ್ಯಾಸ್ಪದರು 6
ಬೆಂಡಾಗಿರುವುದು ಶರೀರ-
ಧರ್ಮವು ಬೇರೊಬ್ಬರ ಕಾಣೆ
ಉಂಡುಟ್ಟು ತೆಗೆಯುವ ವಿಷಯದಿ
ಊರಿನವರ ದೂರುವುದಿನ್ಯಾಕೆ 7
ಹರಿನಾಮದ ಬಲದಿಂದ ಗಳಿಸಿದುದು
ಹರಿಗೆ ಪ್ರೀತಿಯಾಯಿತು
ಪರರು ವ್ಯರ್ಥವಾಗಸೂಯೆ ಪಟ್ಟರೆ
ದುರಿತವ ಪ್ರಯೋಜನವು ಸತ್ಯವಿದು 8
ಏನು ಕೋರುವುದು ಸಾಕು
ಸೀತಾಪತಿ ಗುರುರಾಮವಿಠ್ಠ-
ಲನ ಸೀಮೆ ಈಗಲು ಮುಂದಕು ಇರಬೇಕು9