ಯಾರು ಮೀರಲರಿದು ಬ್ರಹ್ಮ ಬರೆದಲಿಖಿತವ
ಪುರಾರಿ ಮಿತ್ರನೊಬ್ಬ ಬಲ್ಲನಿದರ ಕೆಲಸವ ಪ
ಎಲ್ಲಿ ದಂಡು ಎಲ್ಲಿ ಗೂಳ್ಯವೆಲ್ಲಿಗಮನವಲ್ಲಿ ವಾಸ
ವೆಲ್ಲಿ ಊಟವೆಲ್ಲಿ ಶಯನವು
ಎಲ್ಲಿ ನಿದ್ದೆ ಎಲ್ಲಿ ಸುಲಿಗೆ ಎಲ್ಲಿ ಕಡಿತ
ವೆಲ್ಲಿ ಮರಣ ವೆಲ್ಲಿ ರುದ್ರಭೂಮಿ ಮೆತ್ತೆಲ್ಲಿ ಜನನವು 1
ಊರದೆಲ್ಲಿ ಮನೆಗಳೆಲ್ಲಿ ನಾರಿ ನೆಂಟರಿಷ್ಟರೆಲ್ಲಿ
ಸೇರಿಸಿಟ್ಟ ವಸ್ತು ವಡವೆ ಒಂದು ಕಾಣವು
ಭೂರಿ ಪಶುಗಳೆಲ್ಲಿ ಭಯವು ಏರಿ ನೋಳ್ವಗುಡ್ಡ ಸಂ
ಚಾರವೆಲ್ಲಿ ಹಸಿವು ತೃಷೆಯು ಹರುಷ ದುಃಖವು 2
ಹಿಂದುಯಿಲ್ಲ ಮುಂದುಯಿಲ್ಲ ಸಿಂಧುತನಕ ತಪರರಿಂದ ಕೆಟ್ಟ
ದಿಂದ ಸಲಹುತಿರುವ ಮರುತ
ನಂದನ ಕೋಣೆವಾಸ ಲಕ್ಷ್ಮೀರಮಣ ಬಲ್ಲನೋ 3