ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಮನದ ಡೊಂಕ ತಿದ್ದಯ್ಯಾ ಗೋಪಾಲಕೃಷ್ಣ ಪ ಎನ್ನ ಮನದ ಡೊಂಕ ತಿದ್ದಿ ಮುನ್ನ ಮನ್ನಿಸದಿ[ರೆ]ತಿದ್ದಿಬನ್ನ ಪಡಲಾರೆ ಭವಾಬ್ಧಿಯನ್ನೆ ದಾಟಿಸೊ ಅಪಾರಮಹಿಮ ಅ.ಪ. ಉದಯವಾದರೆ ಊಟದ ಚಿಂತೆ ಉಂಡಮೇಲೆ ಭೋಗದ ಚಿಂತೆದರಮೇಲೆ ಹದಿನಾಲ್ಕು ಲೋಕಂಗಳನೆ ಆಳ್ವ ಚಿಂತೆ 1 ಸುಖವು ಬಂದರೆ ನಾನೆ ಸಮರ್ಥ ದುಃಖವು ಬಂದರೆ ಹರಿಯುಮಾಡ್ದರೊಕ್ಕ ಬಂದರೆ ನಾನೆ ಧನಿಕ ಸಿಕ್ಕಿಬಿದ್ದರೆ ಹರಿಯ ವ್ಯಾಪಾರ 2 ತಿಳಿದು ತಿಳಿದು ಪತಂಗದ್ಹುಳವು ಕಿಚ್ಚಿನಲ್ಲಿ ಬೀಳೋಹಾಂಗೆಕಾಲಕಳೆದೆ ಮೂಕನಂತೆ ಮುದ್ದು ಹಯವದನನೆ 3
--------------
ವಾದಿರಾಜ
ದುರ್ಲಭ ಇದು ಕಲಿಯುಗದೊಳಗೆ ಕಾಣಾ ಎಲ್ಲರಿಗೆ ದೊರಕಬಲ್ಲದೆ ಶ್ರೀ ವಲ್ಲಭನ ಪಾದಸೇವೆ ಮಾಡೋ ನೀ ನಲಿದಾಡೋ ಎಲೆ ಮನುಜಾ ಪ ಗಂಧರ್ವರು ಸಿದ್ಧರು ವಿದ್ಯಾ ದರಸಾಧ್ಯ ಗುಹ್ಯಕ ಸುರಮುನಿಗಣ ಗರುಡಾದ್ಯರೆ ನೆರೆದು ಪುರಹರ ಮೂವನ ಬಲ್ಲಿದರೀ ಇಲ್ಲವೆನುತಲಿ ಬರಿದು ರೇಖೆಯ ಬರಿಸಿದರೊ ಡಂಗುರ ಹೊಯಿಸಿದರೊ ಎಲೆ ಮನುಜಾ 1 ಹರಿಯೆಂತೆಂದವ ಧರ್ಮಕೆ ಸಂದವ ಕರದಲಿ ದಂಡಿಗೆ ಪಿಡಿದವ ಪುಣ್ಯವ ಪಡೆದವ ಚರಣದ್ವಯದಲಿ ಗೆಜ್ಜೆಯ ಕಟ್ಟಿದವ ಅಟ್ಟಿದವ ಯಮ ಭಟರ ಹರಿಹರಿದಾಡುತ ಕುಣಿದವ ಉತ್ತಮ ಗುಣದವ ಹಿರಿದಾಗಿ ಗಾಯನ ಪಾಡಿದವ ಸುರರನ ಗೂಡಿದವ ಮಾಯವ ಬಿಡೋ ಎಲೆ ಮನುಜಾ2 ಭವಾಬ್ಧಿ ದಾಟಿದವ ಇಂಬಾಗಿ ಕಡ್ಡಿ ವಾದ್ಯವ ಹಾಕಿದವ ದುರುತವ ನೂಕಿದವ ಸಂಭ್ರಮ ತಾಳ ಕಟದವ ಊಟದವ ಸುರರೊಡನೆ ತುಂಬಿದ ದಾಸರ ಸಭೆಯೊಳಗಿದ್ದವ ನರಕವನೊದ್ದವ ಕಂಬನಿ ಪುಳಕೋತ್ಸವ ಸುರಿದವ ತತ್ವವನರಿದವ ನೀ ಸುಖದಲಿ ಬಾಳೊ ಎಲೆ ಮನುಜಾ 3 ಬೇಸರದಲೆ ಹೇಳಿ ಏಕಾದಶಿಯ ವಾಸರದಲಿ ಜಾಗರವನು ಗೈದ ಮಾನೀಸನು ಅಘನಾಶನು ಚರಣಕೆ ಏರಿಸಿದನಿವ ಬೆರೆದು ಎಲೆ ಮನುಜಾ4 ಗೋಪಾಳವನು ಬೇಡಿ ನಿತ್ಯಸುಖಿಯಾಗಿ ತಾಪತ್ರೆಯ ಮೊದಲಾದ ದುಷ್ಕರ್ಮ ಪಾಪರಹಿತನಾಗಿ ಸಿರಿ ಪದ್ಮವ ಪೊಂದಿದ ಭಜಕರು ಒಂದೇ ಗೇಣೊ ಎಲೆ ಮನುಜಾ 5
--------------
ವಿಜಯದಾಸ
ಬಯಗುತನಕ ಆಟ ಕೂಟ ಊಟದ ಕೆಲಸ ಉಂಡ ಮೇಲೆ ಶಯನ ಪ ಬಯಲಾಯಿತು ಈ ಒಗತನವೆಲ್ಲ ರಕ್ಷಿಸಯ್ಯ ರಘುಕುಲ ತಿಲಕ ಅ ಪುರಾಣವಿಲ್ಲ ಪುಣ್ಯಕತೆಯಿಲ್ಲ ಪಾರಾಯಣದಿ ಮನಸಿಲ್ಲತರೋಣ ಬರೋಣ ತಿನ್ನೋಣ ಮಲಗೋಣ ಮತ್ತೇಳೋಣ 1 ಕಣ್ಣಿಗೆ ಜೋಂಪು ಹತ್ತುವತನಕ ಅನ್ಯವಿಷಯ ಮಾತುಕತೆಯಾಟಹೆಣ್ಣು ಹೊನ್ನು ಮಣ್ಣು ಮಮಕಾರದಿ ಒಳಹೊರಗಿಣುಕಾಟ2 ಹೀಗಾಗಿ ನಿನ್ನಲ್ಲಿಗೆ ಬಂದೆ ಇನ್ನಾದರೂ ಸಲಹೊ ಸಿರಿಕಾಗಿನೆಲೆಯಾದಿಕೇಶವ ಶಿರಬಾಗಿ ಬೇಡಿಕೊಂಬೆ 3
--------------
ಕನಕದಾಸ
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು
ಅಂತಕನ ದೂತರಿಗೆ ಕೃಪೆಯಿಲ್ಲವದರಿಂದ |ಚಿಂತೆಯನು ಬಿಟ್ಟು ಶ್ರೀ ಹರಿಯೆ ನೆನೆ ಮನವೆ ಪ.ದಿವರಾತ್ರಿಯೆನ್ನದೇ ತಿರುಗಿ ಲಂಪಟನಾಗಿ |ಸವಿಗಂಡ ಊಟಗಳ ಉಣಲರಿಯದೆ |ಅವನ ಕೊಂದು ಇವನ ಕೊಂದು ಅರ್ಥವನು ಗಳಿಸಿಕೊಂಡು |ಜವನ ದೂತರು ಬಂದು ಎಳೆವ ಹೊತ್ತರಿಯೆ 1ಮೊನ್ನೆ ಮದುವೆಯಾದೆ ಕರೆವುವು ಒಂದೆರಡಮ್ಮೆ |ನಿನ್ನೆ ಕೊಂಡೆನು ಕ್ಷೇತ್ರ ಫಲಬಾಹೊದು ||ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲಾ |ತನ್ನ ದೂತರು ಬಂದು ಎಳೆವ ಹೊತ್ತರಿಯೆ 2ಹೊಸ ಮನೆಯ ಕಟ್ಟಿದೆನು ಗೃಹಶಾಂತಿ ಮನೆಯೊಳಗೆ |ಬಸಿರೆ ಹೆಂಡತಿ ಮಗನ ಮದುವೆಯು ನಾಳೆ ||ಹಸನವಾಗಿದೆ ಬದುಕು ಸಾಯಲಾರೆನು ಎನಲು |ವಿಷಮ ದೂತರು ಬಂದು ಎಳೆವ ಹೊತ್ತರಿಯೆ 3ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬಮತ್ತೊಬ್ಬ ಮಗನ ಉಪನಯನ ನಾಳೆ ||ಅರ್ಥಿಯಾಗದೆ ಬದುಕು ಸಾಯಲಾರೆನು ಎನಲು |ಮೃತ್ಯು ಹೆಡತಲೆಯಲಿ ನಗುತಿಹುದರಿಯೆ 4ಅಟ್ಟಡಿಗೆ ಉಣಲಿಲ್ಲ ಇಟ್ಟ ನೀರ್ಮೀಯಲಿಲ್ಲ |ಕೊಟ್ಟ ಸಾಲವ ಕೇಳ್ವ ಹೊತ್ತ ಕಾಣೆ ||ಕಟ್ಟಕಡೆಯ ದಿವಸ ತಂಬಿದ ಬಳಿಕಿರಲಿಲ್ಲ |ಇಷ್ಟರೊಳು ಪುರಂದರವಿಠಲನ ನೆನೆಮನೆವೆ 5
--------------
ಪುರಂದರದಾಸರು
ಎನ್ನ ಮನದ ಡೊಂಕ ತಿದ್ದಿ-ಚರಣದಲ್ಲಿ ಸೇರಿಸೋ |ನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೆ ಕೃಷ್ಣ ಪಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ||ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ 1ನೆರೆಮನೆಗಳ ಭಾಗ್ಯವ ನೋಡಿ-ತರಹರಿಸುತ ಅಸೊಯೆಯಿಂದ |ಹರಿಯ ಸ್ಮರಣೆಗೆ ವಿಮುಖನಾದೆ - ನರರಸ್ತುತಿಯ ನಾ ಮಾಡಿದೆ ||ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ |ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ 2ಅಗಣಿತಸುಖ ಬಂದರೆ ನಾನು -ಅಗಣಿತದುಃಖಕೆ ಹರಿಯೆನ್ನುವೆನು |ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ||ಮಿಗೆ ಹಾನಿಗೆ ಹರಿಯನು ದೂಷಿಸಿನೆಗೆದು ಪತಂಗವು ಕಿಚ್ಚಲಿ ಬೀಳುವ |ಬಗೆ ನಾನಾದೆನುಪುರಂದರವಿಠಲನಖಗರಾಜಸುವಾಹನ ಶ್ರೀ ಕೃಷ್ಣ 3
--------------
ಪುರಂದರದಾಸರು
ಬಾರೋ ವಾರಣವದನಾ ತ್ರೈಲೋಕ್ಯ ಸನ್ಮೋಹನತೋರೋ ಕಾರುಣ್ಯ ಸದಾನಂದಾ ಪಮಾರಹರನ ಪರಿವಾರಕಧೀಶನೆನಾರಿ ಗಿರಿಜೆ ಸುಕುಮಾರನೆ ಧೀರನೆ ಅ.ಪಪೊಡಮಡುವೆನು ನಿನ್ನಯಾ ಚರಣಕ್ಕೆ ದೇವಾಎಡಬಿಡದೀಗಲೆನ್ನಯಾತೊಡರ್ಕಿ ಅಡವಿಯ ಕಡಿಕಡಿದಡಸುತಕಡುಬಡವಗೆ ತಡವಿಡದ್ವರ ಕೊಡುವಂತೆ 1ಝಗಝಗಿಸುವ ಪೀಠದಿ ಮಂಡಿಸಿಕೊಂಡುಸೊಗಸೊ ಸಾಗಿ ಊಟದೀಬಗೆಬಗೆ ಭಕ್ಷವ ತೆಗೆತೆಗೆದು ಮೊಗೆವಂತೆಮೃಗದೃಗಯುಗವರ ನಗೆಮೊಗ ಸುಗುಣನೆ 2ಫಣಿಶಾಯಿ ಗೋವಿಂದನಾ ದಾಸರ ವಂದ್ಯತ್ರಿನಯನಮೂರ್ತಿ ನಂದನಾಕಣುದಣಿ ನೋಡುವೆಮಣಿಗಣಭೂಷಣಝಣಝಣ ಕುಣಿಂiÀುುತ ಗುಣಮಣಿ ಗಣಪತಿ 3
--------------
ಗೋವಿಂದದಾಸ