ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರ್ಮನಾಮಕ ಧರ್ಮಕಾರಿ ಪ ನಿರ್ಮಮನ ಮಾಡೆನ್ನ ನಿರ್ಮಮರ ದೊರೆ ಹರಿಯೆ ಅ.ಪ ಸೂರ್ಯ ಸುಂದರಮೂರ್ತಿ ಭೂರಿ ಕರುಣಿ ಮೀರಿಹ ಅಹಂಜ್ಞಾನ ತಿಮಿರವನು ಪರಿಹರಿಸು ಮಾರಮಣ ಮಾಂ ರಕ್ಷ ರಕ್ಷಿಸು ದಯವನಧಿ 1 ಅಜ ರುದ್ರ ಸುರರೆಲ್ಲ ವಂದಿಸಲು ಬಧಿರರಂತಿರುವರಯ್ಯ ಹಿಂದು ಮುಂದೆಂದೆಂದು ಎನ್ನಲ್ಲಿ ನೀ ಕುಣಿಸಿ ದಂದದಲಿ ನಾ ಕುಣಿದೆ ಅರ್ಪಿತವಾಗಲಿ ನಿನಗೆ 2 ಮೋಚಕನೆ ಜಯೇಶವಿಠಲನೆ ವಿಧಿವಂದ್ಯ ಯಾಚಿಪೆನು ವಿಜ್ಞಾನ ಕರುಣಿಸೆಂದು ಊಚುನೀಚದಿ ನಿನ್ನ ಪೂರ್ಣ ಮೂರ್ತಿಯ ಮಹಿಮೆ ಗೋಚರಕೆ ಬರುವಂತೆ ಆಚರಿಸು ಎನ್ನಲ್ಲಿ3
--------------
ಜಯೇಶವಿಠಲ
ಛೀ ಛೀ ಬಿಡು ಸಂಸಾರಾಬ್ಧಿಯ ದಾಂಟಲು ನಾವೆಯಚಾಚು ಛೂ ಛೂ ಎಂದರು ಸರ್ವನು ಒಂದಿಷ್ಟು ನಾಚಿಕೆಯಿಲ್ಲ ಈಸು ಪ ಬಿಡುವುದೆ ಲೇಸು ಗಾದಿಯು ತಿಳಿಯದು ಈಸು ಪ್ರಾಚೀನ ಕರ್ಮವಿ ದೀಸು ತಾರಕ ಮಂತ್ರವ ಸೂಸು 1 ಹೊನ್ನಿನ ಬಳಿಯಲಿ ಸರ್ವಾಭರಣವು ಚಿನ್ನವು ಎನಿಸದ ಹಾಗೆ ಚೆನ್ನಾಗಿ ತೋರುವಹಾಗೆ ಕಣ್ಣಲಿ ಕಾಣುವುದೆಲ್ಲ ಕಡೆಯಲಿ ನುಣ್ಣಗೆ ಲಯವಾದಹಾಗೆ ರೂಪನು ತಾನಾದ ಹಾಗೆ 2 ರೇಚಕ ಪೊರಕ ಕುಂಭಕವಿರವನು ಸಾಧಿಸು ನಿನಗದು ಊಚು ಗೋಚರ ದೊಳು ಲಘುತೋಚು 3
--------------
ಕವಿ ಪರಮದೇವದಾಸರು
ಪುರಂದರ ಗುರುರಾಯಾ ಸತ್ಪ್ಪುಣ್ಯ ಕಾಯಾ ಪ ನಿರುತ ನಿನ್ನ ಚರಣ ಸೇವೆ ಕರುಣ ಮಾಳ್ಪದೋ ಜೀಯಾಅ.ಪ. ಬಹು ಜನ್ಮಗಳಲ್ಲಿ ನಾನು ಮಹ ಪುಣ್ಯ ಮಾಡಿದವರ ಸಹವಾಸದಲಿದ್ದು ಗ್ರಹದ ಮುಂದೆ ಗ್ರಹದಿಂದೆನಗೆ ಮಹಿಸುರ ಜನ್ನವಿತ್ತೆ 1 ಶ್ವಾನ ಸೂಕರನೊ ನಾನದನು ಕಾಣೆನೊ ಮತ್ತಾವನೊ ನಾನಾ ಜೀವನೊ ಆನು ಒಂದು ತಿಳಿಯೆ ಗುರುವೆ ನೀನೆ ಬಲ್ಲಿ ಎನಗೆ ಬಂದ ಅನಾದಿ ಶರೀರವ ಅಜ್ಞಾನವನ್ನೇ ತೆಜಿಸುವುದು2 ಯಾಚನೆ ದೇಹದಲ್ಲಿ ಊಚು ಭಾಗ್ಯವ ಜಯಸದಿಪ್ಪ ಯೋಚನೆಯಿಂದಲಿ ಕಮಲಲೋಚನ ನಿನ್ನಂಘ್ರಿಯಾ ಕರವ ಬಾಚೆನೊ ಹೀನರಿಗೆ ನಿನ್ನ ಪಾಚಕರ ಮನೆಯ ಪರಿಚಾರ ಸಿದ್ಧÀ್ದವಾಗಲಿ 3 ಹಿಂದೆ ಏನು ಪ್ರೇರಿಸಿದಿಯೊ ನಂದವ ನಾನರಿಯೆನೊ ತಂದೆ ತಾಯಿ ನೀನೆ ಎಂದು ಪೊರದಿ ಸಂದೇಹವಿಲ್ಲ ಯೆಂದು ಪೊರೆದದ್ದು ನಿನ ಕರುಣವಲ್ಲವೆ ಮತ್ತೆ ಭಾರವು ನಿನದೆಂದು ನಾ ಪ್ರಾರ್ಥಿಸುವೆ 4 ತಿರುಗುವುದು ಕುಳ್ಳಿರುವುದು ಬರುವುದು ಮತ್ತೇಳುವದು ಮರಳೆ ಮಾತನಾಡುವುದು ವಾಸರದಲ್ಲಿ ಬಿಡದೆ ಸಿರಿ ವಿಜಯವಿಠ್ಠಲನ್ನ ಕರದೊಳಿಪ್ಪಂತೆ ಮಾಳ್ಪದೊ ಜೀಯಾ 5
--------------
ವಿಜಯದಾಸ
ಪೋಗುವೆವಮ್ಮ ಪ ಉದಯವಾಗದ ಮುನ್ನ ಬರುವ ಕಣಮ್ಮ ಕದವ ಬಾರಿಸಿ ಒಳಪೊಕ್ಕ ಕಣಮ್ಮ ಮೊದಲೆನ್ನ ಮಗಳ ತಕ್ಕೈಸಿದನಮ್ಮ ಸದರದಲಿ ಮೊಸರನೆಲ್ಲ ಕುಡಿದ ಕಣಮ್ಮ 1 ಉಟ್ಟ ಸೀರೆಯ ಬೆಲೆ ಏನೆಂದಮ್ಮ ಪಟ್ಟೆ ಕುಪ್ಪಸಕೇನು ಪಣವೆಂದನಮ್ಮ ತೊಟ್ಟು ಕೊಂಡೆನ್ನನು ಬಿಡದೆ ಕಾಣಮ್ಮ 2 ನಸುಗಪ್ಪಿನೊಳು ಸಜ್ಜೆಮನೆಯೊಳಗಮ್ಮ ಮೊಸರು ಪಾಲ್ಬೆಣ್ಣೆಯ ಮೆದ್ದ ಕಾಣಮ್ಮ ಸೊಸೆಯು ಪಿಡಿಯೆ ಬಿಗಿದಪ್ಪಿದನಮ್ಮ ನಸು ಬೆವರಿಡೆ ತನು ಬಿಡದೆ ಕಾಣಮ್ಮ 3 ಜಾರ ಜೋರರ ಶಿಖಾಮಣಿಯಿವನಮ್ಮ ಯಾರೆಂದು ಹೊರಗೊಬ್ಬ ಕರೆಯೆ ಗೋಪಮ್ಮ ಚೋರ ಗಂಡಿಯ ಪೊಕ್ಕು ಓಡಿದನಮ್ಮ 4 ಊಚು ನೀಚುಗಳೇನು ಇವಗಿಲ್ಲವಮ್ಮ ನಾಚಿಕೆನಮಗಾಗುತಿದೆ ಹೇಳಲಮ್ಮ ಕೀಚಕರಿಪು ಕೋಣೆ ಲಕ್ಷ್ಮೀಶಗಮ್ಮ ವಾಚಿಸೆ ನೀನೊಂದ ಮಾತ ನಮ್ಮಮ್ಮ 5
--------------
ಕವಿ ಪರಮದೇವದಾಸರು