ನೀಚಮತಿ ಎಲೆ ನೀಚಮತಿ
ಊಚನೆನಿಸಿಕೊಂಬ ಯೋಚನೆ ಬಿಡುಕಂಡ್ಯ ಪ
ತರಿಯದೆ ಕುಟಿಲತ್ವ ಮರೆಯದೆ ದುಶ್ಚಟ
ಧರೆಯ ಭೋಗವ ನೆಚ್ಚಿ ಶರಣರ್ವೇಷÀವÀ ತಾಳಿ
ಮರವೆ ಮಾಯದಿ ಬಿದ್ದು ಒರಲುವ ನರರಿಗೆ
ಬರಿದೆ ಬೋಧಿಪೆನೆಂಬ ಭ್ರಮೆಯಿಂದ ಫಲವೆ 1
ಮಾಯಮೋಹಿಗಳ ಉಪಾಯದಿ ಕೂಡಿಸಿ
ಸೇವಿಸದಾಹಾರ ಸೇವಿಸುತನುದಿನ
ಕಾಯಬಲಿಸಿ ಕುಣಿವ ಮಾಯಮೋಹಿಯ ಬರಿ
ಬಾಯ ಬ್ರಹ್ಮತ್ಯಬಂಧ ಬಯಲಪ್ಪುದೇನೆಲೆ 2
ಧರಿಸಿದ ಲಾಂಛನ ಅರಿಯದೆ ಮೇಲೆ ನೀ
ಬರಿದೆ ಕಾವಿಯನ್ಹೊದ್ದು ಕರದಿ ಕಮಂಡಲ
ಧರಿಸಿ ಮರುಳರಿಗೆಲ್ಲ ಪರತತ್ತ್ವವರಿಯಲು
ಜರೆಮರಣದು:ಖವು ಪರಹಾರಮೆಂತೆಲೆ 3
ಭವಭವದಲಿ ಬಟ್ಟಬವಣೆಯ ಸ್ಮರಿಸಿದೆ
ಭವಗೆಲಿಸುವ ಅನುಭವ ತಿಳಿಯದೆ ಸ
ದ್ಭವಿಗಳ ನೆರೆಯಿಸಿ ಕವಿತೆ ಬಿಡಿಸಿ ಬಹು
ಸವಿಮಾತ್ಹೇಳಲು ಮೂಲಭವಭೀಜಳಿಯುವುದೆ 4
ತನ್ನ ತನ್ನದುಯೆಂಬ ಭಿನ್ನವಿಲ್ಲದೆಸದಾ
ತನ್ನ ಸ್ವರೂಪ ಪರರನ್ನು ಬಗೆದು ನಿತ್ಯ
ಸನ್ನುತ ಶ್ರೀರಾಮನುನ್ನತಂಘ್ರಿಗೆ ಪೊಂದಿ
ಧನ್ಯರಾಗದೆ ನರಕುನ್ನಿಯೆನಿಸುವರೇನೋ5